ಶನಿವಾರ, ಮಾರ್ಚ್ 25, 2023
29 °C

ಕಾರ್ಯಕರ್ತರಿಂದಲೇ ಬಿಜೆಪಿ ಕಾರ್ಯಾಲಯ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಯಕರ್ತರಿಂದಲೇ ಬಿಜೆಪಿ ಕಾರ್ಯಾಲಯ ಧ್ವಂಸ

ಸಿಂದಗಿ:  ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಧ್ವಂಸಗೊಳಿಸಿ ದಾಂಧಲೆ ಮಾಡಿದ ಘಟನೆ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿಯಲ್ಲಿ ಸೋಮವಾರ ನಡೆದಿದೆ.ದೇವರಹಿಪ್ಪರಗಿ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಅಶೋಕ ಅಲ್ಲಾಪುರ ಅವರಿಗೆ ’ಬಿ’ಫಾರಂ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಹಠಾತ್ತನೇ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯಕ್ಕೆ ಧಾವಿಸಿ ಪಕ್ಷದ ಬ್ಯಾನರ್ ಹರಿದು, 25ಕ್ಕೂ ಅಧಿಕ ಕುರ್ಚಿಗಳನ್ನು ಮುರಿದು ಹಾಕಿ ಅವುಗಳಿಗೆ ಬೆಂಕಿ ಹಚ್ಚಿದರು.ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ.ಆರ್.ಆರ್.ನಾಯಕ ಅವರ ಮುಖಕ್ಕೆ ಮಸಿ ಹಚ್ಚಿ ರಾಜೀನಾಮೆಗೆ ಒತ್ತಾಯಿಸಿದರು.

ತಮ್ಮ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತನಿಗೆ ಟಿಕೆಟ್ ನೀಡದೇ ಸಿಂದಗಿ ಕ್ಷೇತ್ರದ ಅಶೋಕ ಅಲ್ಲಾಪುರ ಅವರಿಗೆ ಟಿಕೆಟ್ ನೀಡಿರುವುದೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.“ನಮ್ಮ ಕ್ಷೇತ್ರದವರಲ್ಲದ ಬೇರೊಬ್ಬರನ್ನು ಜಿ.ಪಂ. ಅಭ್ಯರ್ಥಿಯಾಗಿ ’ಬಿ’ಫಾರಂ ನೀಡಿರುವುದು ಅನ್ಯಾಯದ ಪರಮಾವಧಿಯಾಗಿದೆ. ಹೀಗಾಗಿ ಅಲ್ಲಾಪುರ ಪರ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುತ್ತೇವೆ” ಎಂದು ಬಿಜೆಪಿ ಪ್ರಮುಖರಾದ ಶಿವಾಜಿ ಮೆಟಗಾರ, ರಮೇಶ ಮಸಬಿನಾಳ, ಪ್ರಮೋದ ನಾಡಗೌಡ, ಲೋಕೇಶ ಸೌದಿ ಹೇಳಿದರು.ಅಸಮಾಧಾನ: ತಮ್ಮ ಕ್ಷೇತ್ರದವರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿರುವುದು ತಮಗೂ ತೀರ ಅಸಮಾಧಾನ ತರಿಸಿದೆ ಎಂದು ಬಿಜೆಪಿ ಅಧ್ಯಕ್ಷ ಡಾ.ಆರ್.ಆರ್. ನಾಯಕ ’ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.ರಾಜೀನಾಮೆ:ಟಿಕೆಟ್ ಹಂಚಿಕೆ ವಿಷಯವಾಗಿ ಮಹೇಶ ಬುದ್ನಿ ಅವರು ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದ್ಯಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.