ಶುಕ್ರವಾರ, ಜೂನ್ 25, 2021
22 °C

ಕಾರ್ಯ ನಿರ್ವಹಿಸದ ಕಣ್ಗಾವಲು ಕ್ಯಾಮೆರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲರು, ಮಾಧ್ಯಮ ಹಾಗೂ ಪೊಲೀಸರ ನಡುವೆ ಇದೇ ಎರಡರಂದು ನಡೆದಿರುವ ಜಟಾಪಟಿಗೆ ಸಾಕ್ಷಿಯಾಗಬೇಕಿದ್ದ ಕೆ.ಆರ್.ವೃತ್ತದ ಬಳಿಯ ಕಣ್ಗಾವಲು ಕ್ಯಾಮೆರಾ ಅಂದು ಕೆಲಸ ನಿರ್ವಹಿಸಲಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದೆ.ಅಂದು ನಡೆದಿರುವ ಘಟನೆ ಬಗ್ಗೆ ಕ್ಯಾಮೆರಾಗಳಲ್ಲಿ ಇರುವ ಮಾಹಿತಿ ನೀಡುವಂತೆ ಈ ಹಿಂದೆ ಕೋರ್ಟ್ ನಿರ್ದೇಶಿಸಿತ್ತು. ಅದಕ್ಕೆ ಉತ್ತರವಾಗಿ ಹಲಸೂರುಗೇಟ್ ಉಪ ವಿಭಾಗದ ಎಸಿಪಿ ಕೆ.ಎ.ಜಿತೇಂದ್ರನಾಥ್ ಪ್ರಮಾಣ ಪತ್ರ ಸಲ್ಲಿಸಿದ್ದು, ಅದರಲ್ಲಿ ಈ ವಿವರಣೆ ನೀಡಿದ್ದಾರೆ.`ಅಂದು ಬೆಳಿಗ್ಗೆ 6.45ರಿಂದ ರಾತ್ರಿ 9.30ರವರೆಗೆ ಯುಪಿಎಸ್‌ನಲ್ಲಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕ್ಯಾಮೆರಾ ಕಾರ್ಯ ನಿರ್ವಹಿಸಲಿಲ್ಲ. ಕೆ.ಆರ್.ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು 175 ಕ್ಯಾಮೆರಾಗಳು ಇದ್ದು ಆ ಪೈಕಿ 30ರಿಂದ 40 ಕ್ಯಾಮೆರಾಗಳು ತಾಂತ್ರಿಕ ದೋಷದಿಂದ ಅಂದು ಕಾರ್ಯ ನಿರ್ವಹಿಸಲಿಲ್ಲ~ ಎಂದು ಅವರು ತಿಳಿಸಿದ್ದಾರೆ. ಈ ಕುರಿತಾಗಿ `ಸಿಎಂಎಸ್ ಇನ್‌ಫಾರ್ಮೇಷನ್ ಸಿಸ್ಟಮ್~ ನೀಡಿರುವ ವರದಿಯ ಬಗ್ಗೆಯೂ ಅವರು ದಾಖಲೆ ನೀಡಿದ್ದಾರೆ.ಪ್ರಕರಣಗಳ ಮಾಹಿತಿ: ಪೊಲೀಸ್, ವಕೀಲರು ಹಾಗೂ ಮಾಧ್ಯಮಗಳ ವಿರುದ್ಧ ಪರಸ್ಪರ ಒಟ್ಟು 155 ಪ್ರಕರಣಗಳು ಇಲ್ಲಿಯವರೆಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.8 ಕಾರು ಹಾಗೂ 22 ದ್ವಿಚಕ್ರ ವಾಹನಗಳನ್ನು ಸುಡಲಾಗಿದೆ. 28 ಕಾರು ಹಾಗೂ 58 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಲಾಗಿದೆ. ಅಷ್ಟೇ ಅಲ್ಲದೇ 10 ಕಾರು ಹಾಗೂ ಒಂದು ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸಿಬಿಐಗೆ ನೋಟಿಸ್: ಈ ಮಧ್ಯೆ, ಪೊಲೀಸರು ಹಾಗೂ ಮಾಧ್ಯಮಗಳ ವಿರುದ್ಧ ವಕೀಲರು ಬುಧವಾರವೂ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಮ್ಯಾ ಎಂಬ ಕಾನೂನು ಪದವಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಪ್ರಸಾರ ಭಾರತಿ ಹಾಗೂ ಪ್ರತಿವಾದಿಯಾಗಿರುವ ಇತರರಿಗೂ ನೋಟಿಸ್ ಜಾರಿಗೆ ಪೀಠ ಆದೇಶಿಸಿದೆ. ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ಸಲ್ಲಿಸಲಾದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.