ಮಂಗಳವಾರ, ಜೂನ್ 22, 2021
29 °C

ಕಾರ್‌ಬಾಂಬ್‌ ಸ್ಫೋಟ: 18 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್‌ (ಐಎಎನ್‌ಎಸ್‌): ತಾಲಿಬಾನಿಗಳು ಪೊಲೀಸ್‌ ಠಾಣೆಯ ಮೇಲೆ ನಡೆಸಿದ ಕಾರ್‌ ಬಾಂಬ್‌ ಹಾಗೂ ಗುಂಡಿನ ದಾಳಿಯಲ್ಲಿ ಏಳು ಉಗ್ರರು ಸೇರಿ ಹದಿನೆಂಟು ಮಂದಿ ಮೃತಪಟ್ಟು, ಹದಿನಾರು ಮಂದಿ ಗಾಯಗೊಂಡಿರುವ  ಘಟನೆ ಇಲ್ಲಿನ ಜಲಾಲಾಬಾದ್‌ ನಗರದಲ್ಲಿ ನಡೆದಿದೆ.



ದಾಳಿಯಲ್ಲಿ  ಮೃತಪಟ್ಟಿರುವರ ಪೈಕಿ  ಒಬ್ಬ ವಿದ್ಯಾರ್ಥಿ ಹಾಗೂ ಹತ್ತು ಪೊಲೀಸರು ಸೇರಿದ್ದಾರೆ. ಒಬ್ಬ ಪತ್ರಕರ್ತ ಹಾಗೂ ಹದಿನಾಲ್ಕು ಪೊಲೀ ಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.



ಅಲ್ಲದೇ ಇಲ್ಲಿನ ಸರ್ಕಾರಿ ದೂರದರ್ಶನ ಕಟ್ಟಡ ಹಾಗೂ ಪೊಲೀಸ್‌ ಠಾಣೆಯ ಕಟ್ಟಡಕ್ಕೂ  ತೀವ್ರ ಹಾನಿ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.