ಕಾಲುವೆಯಲ್ಲಿ ವಿಗ್ರಹ ಪತ್ತೆ

ಹೊಸಪೇಟೆ: ಮಹಾವೀರ ಮತ್ತು ತೀರ್ಥಂಕರರ ಉಬ್ಬು ಚಿತ್ರಗಳಿರುವ ಒಟ್ಟು ಮೂರು ತಾಮ್ರದ ವಿಗ್ರಹಗಳು ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದ ಕಾಲುವೆಯಲ್ಲಿ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿವೆ.
ಬುಕ್ಕಸಾಗರ ಗ್ರಾಮದ ವೀರಣ್ಣ ಕ್ಯಾಂಪ್ ಬಳಿ ಇರುವ ಎಲ್ಎಲ್ಸಿ ಕಾಲುವೆಯಲ್ಲಿ ನೀರು ಹರಿಯುವುದನ್ನು ಸಂಪೂರ್ಣ ನಿಲ್ಲಿಸಿರುವುದರಿಂದ ತಳದಲ್ಲಿ ಈ ವಿಗ್ರಹಗಳು ಕಾಣಿಸಿಕೊಂಡಿವೆ. ಅಂದಾಜು ತಲಾ 6 ಕೆ.ಜಿ. ತೂಕವಿರುವ ಈ ವಿಗ್ರಹಗಳ ಪೈಕಿ ಒಂದರಲ್ಲಿ ಮಹಾವೀರನು ತಪಸ್ಸಿಗೆ ಕುಳಿತಿರುವುದನ್ನು ಕಾಣಬಹುದಾಗಿದೆ. ಉಳಿದೆರಡರಲ್ಲಿ ತೀರ್ಥಂಕರರ ಚಿತ್ರಗಳಿವೆ.
ಯಾರೋ ಕಳವು ಮಾಡಿದ ಈ ವಿಗ್ರಹಗಳನ್ನು ಕಾಲುವೆಯಲ್ಲಿ ಬಿಸಾಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್, ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.