ಬುಧವಾರ, ಮೇ 12, 2021
19 °C

ಕಾಲೇಜಲ್ಲಿ ನೋಡಿ; ಮಂದಿರಾ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜಲ್ಲಿ ನೋಡಿ; ಮಂದಿರಾ ಮೋಡಿ

ತಿಳಿ ನೀಲಿ ಟಿ ಶರ್ಟ್ ತೊಟ್ಟಿದ್ದ ಆಕೆ ಕಾರಿನಿಂದ ಇಳಿದ ಕೂಡಲೆ ಅಭಿಮಾನಿಗಳ ದಂಡು ಆಟೋಗ್ರಾಫ್ ಪಡೆಯಲು ಮುಗಿಬಿತ್ತು. ಕಡು ಕಪ್ಪು ಕನ್ನಡಕದ ಹಿಂದಿನ ಆಕೆಯ ಕಣ್ಣಲ್ಲಿ ಕುತೂಹಲದ ಮಿಂಚು ಹರಿದಾಡುತ್ತಿತ್ತು. ಕಾಲೇಜು ಪೋರ ಪೋರಿಯರು ಮೊಬೈಲ್‌ನ್ಲ್ಲಲಿ ಆಕೆಯ ಮಂದಹಾಸ ಪೂರಿತ ಮೊಗ ಸೆರೆಹಿಡಿಯಲು ಕಿಕ್ಕಿರಿದರೆ ವಿದ್ಯಾರ್ಥಿ ಸಮೂಹದ ನಡುವೆಯೇ ಫೋಟೋ ತೆಗೆಯಲು ಛಾಯಾಗ್ರಾಹಕರು ಪರದಾಡಿದರು.ಬಿಚ್ಚು ನುಡಿಯ ಮೂಲಕ ನೆರೆದಿದ್ದವರ ಮನದಲ್ಲಿ ಕ್ರಿಕೆಟ್ ಗುಂಗು ಹಚ್ಚಿ ಮೋಡಿ ಮಾಡಿ ಕ್ಷಣಾರ್ಧದಲ್ಲಿ ಎಲ್ಲರನ್ನೂ ಹುರಿದುಂಬಿಸಿ ಟಾಟಾ ಹೇಳಿದ ಅವರು ಬೇರಾರೂ ಅಲ್ಲ; ಭಾರತೀಯ ಕ್ರಿಕೆಟ್‌ನ ಸೆಲೆಬ್ರಿಟಿ ವೀಕ್ಷಕ ವಿವರಣೆಗಾರ್ತಿ, ತಾರೆ ಮಂದಿರಾ ಬೇಡಿ.ನಗರದ ಯುವಜನರ ಹುಚ್ಚೆಬ್ಬಿಸಿರುವ ನೋಕಿಯಾ ಕ್ರಿಕೆಟ್ ಚಾಂಪಿಯನ್ ಲೀಗ್ ಪ್ರಚಾರಕ್ಕಾಗಿ ಜೆ.ಸಿ ರಸ್ತೆಯ ಮಹಾವೀರ ಜೈನ್ ಕಾಲೇಜಿಗೆ ಬಂದಿದ್ದ ಮಂದಿರಾ, ಚಾಂಪಿಯನ್ ಲೀಗ್ ಪ್ರಚಾರಕ್ಕೆ ಅಧಿಕೃತ ಮುದ್ರೆ ಒತ್ತಿದರು. ಬೆಂಗಳೂರು, ಚೆನ್ನೈ, ಪುಣೆ, ಚಂಡೀಗಡ, ಹೈದರಾಬಾದ್. ಕೋಲ್ಕತ್ತದಲ್ಲಿ ನಡೆಯಲಿರುವ ಪಂದ್ಯಗಳ ಬಗ್ಗೆ ಕಿರು ಮಾಹಿತಿ ನೀಡಿದರು. ಜತೆಜತೆಗೇ ನೋಕಿಯಾ ಮೊಬೈಲ್ ಕಂಪೆನಿಯ ಗುಣಗಾನ ಮಾಡಿದರು.ಚಾಂಪಿಯನ್ ಲೀಗ್‌ನಲ್ಲಿ ಗೆಲ್ಲಲಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್ ಆಗಿರಬಹುದೇ ಎಂದು ಪ್ರಶ್ನಿಸಿದೊಡನೆ ವಿದ್ಯಾರ್ಥಿಗಳಿಂದ ನೋ..ನೋ.. ಎಂಬ ಶಬ್ದ ಪ್ರತಿಧ್ವನಿಸಿತು. ಸಾಮೂಹಿಕವಾಗಿ ಎಲ್ಲ ವಿದ್ಯಾರ್ಥಿಗಳು ವಿಟೋರಿ ನೇತೃತ್ವದ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಬೆಂಬಲ ಸೂಚಿಸಿದರು.ಕೈಗೆ ಗ್ಲೌಸ್ ತೊಟ್ಟು, ಬ್ಯಾಟ್ ಹಿಡಿದು ಕ್ಯಾಮರಾಗಳತ್ತ ನಗೆ ಬೀರಿದ ಮಂದಿರಾ ವಿದ್ಯಾರ್ಥಿಗಳ ಜತೆ ನಿಂತು ಫೋಟೋಗಳಿಗೆ ಫೋಸ್ ನೀಡಿದರು. ಈ ಸಂದರ್ಭದಲ್ಲಿ ನೋಕಿಯಾ ಪ್ರಾದೇಶಿಕ ನಿರ್ದೇಶಕ ಟಿ.ಎಸ್.ಶ್ರೀಧರ್ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.