ಕಾಸಿಗಾಗಿ ಸುದ್ದಿ: ಚುನಾವಣಾ ಆಯುಕ್ತರ ಆತಂಕ

ಶುಕ್ರವಾರ, ಮೇ 24, 2019
33 °C

ಕಾಸಿಗಾಗಿ ಸುದ್ದಿ: ಚುನಾವಣಾ ಆಯುಕ್ತರ ಆತಂಕ

Published:
Updated:

ನವದೆಹಲಿ (ಐಎಎನ್‌ಎಸ್): `ಕಾಸಿಗಾಗಿ ಸುದ್ದಿ~ಯ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.ಬುಧವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು `ಚುನಾವಣೆಯ ಸಂದರ್ಭಗಳಲ್ಲಿ ಇದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಮಾಧ್ಯಮದ ವ್ಯಕ್ತಿಗಳ ನಡುವಿನ ಭ್ರಷ್ಟಾಚಾರದ ಬೆಸುಗೆಯಂತಿರುತ್ತದೆ~ ಎಂದೂ ಅಭಿಪ್ರಾಯ ಪಟ್ಟರು. ಇಂತಹ ಚಟುವಟಿಕೆಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry