ಭಾನುವಾರ, ಜೂನ್ 20, 2021
26 °C

ಕಾಸಿಯಾ: ಹೊಸ ವೆಬ್ ತಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸಿಯಾ: ಹೊಸ ವೆಬ್ ತಾಣ

ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಪ್ರಾರಂಭಿಸಿರುವ  ನೂತನ ವೆಬ್ ತಾಣವು (www.­­kassia.­com) ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಕೈಗಾರಿಕೆ ಸಂಸ್ಥೆಗಳಿಗೆ, ಕಿರು ಉದ್ಯಮಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು  ನೆರವು ನೀಡಲಿದೆ ಎಂದು ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. 



ಇತ್ತೀಚೆಗೆ `ಕಾಸಿಯಾ~ದ ನೂತನ ವೆಬ್ ತಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾಗತಿಕ ಮಾರುಕಟ್ಟೆಯ ದೊಡ್ಡ ಸ್ಪರ್ಧಿಗಳ ಜತೆಗೆ, ಸಣ್ಣ ಕೈಗಾರಿಕೆಗಳು ಸ್ಪರ್ಧಿಸಲು ಈ ಅಂತರಜಾಲ ತಾಣ ನೆರವಿನ ಸೇತುವೆಯಾಗಲಿದೆ ಎಂದರು.



`ತಯಾರಿಕೆ ಸರಕು ಆಧರಿಸಿ ಸಣ್ಣ ಕೈಗಾರಿಕೆಗಳ ಪಟ್ಟಿಯನ್ನು ವರ್ಗೀಕರಿಸಲಾಗಿದ್ದು, ಒಟ್ಟಾರೆ ವೆಬ್ ತಾಣವನ್ನು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಈ ಮೂಲಕ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಆನ್‌ಲೈನ್ ಸೌಲಭ್ಯ ಲಭಿಸಿದೆ~ ಎಂದು `ಕಾಸಿಯಾ~ ಅಧ್ಯಕ್ಷ ಪ್ರಕಾಶ್ ಎನ್. ರಾಯ್ಕರ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.