ಮಂಗಳವಾರ, ಮೇ 11, 2021
24 °C

ಕಿಂಗ್‌ಫಿಷರ್: ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಎಂಜಿನಿಯರ್‌ಗಳು ಶನಿವಾರ ಹಠಾತ್ತಾಗಿ ಮುಷ್ಕರ ನಡೆಸಿದರು. ಎಲ್ಲ ಸಿಬ್ಬಂದಿಯ ವೇತನ ಪಾವತಿಸಿದ್ದಾಗಿ ಈ ಹಿಂದೆ ಕಂಪೆನಿ ಹೇಳಿಕೊಂಡಿತ್ತು.`ಇಲ್ಲಿಯವರೆಗೆ ವೇತನ ಪಾವತಿ ಮಾಡದ ಕಾರಣ ಸುಮಾರು 200 ಎಂಜಿನಿಯರ್‌ಗಳು ಮುಷ್ಕರ ಕೈಗೊಂಡಿದ್ದಾರೆ~ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. `ಕೆಲ ತಾಂತ್ರಿಕ ಅಡಚಣೆಯಿಂದಾಗಿ ವೇತನ ಪಾವತಿಯಾಗಿರಲಿಕ್ಕಿಲ್ಲ. ಬ್ಯಾಂಕ್‌ಗಳು ಅಥವಾ ಏರ್‌ಲೈನ್ಸ್ ವ್ಯವಸ್ಥೆಯಿಂದ ಈ ಸಮಸ್ಯೆ ತಲೆದೋರಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು. ಮುಷ್ಕರದಿಂದ ಕಿಂಗ್‌ಫಿಷರ್ ವಿಮಾನ ಹಾರಾಟದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ~ ಎಂದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.