ಕಿತ್ತೂರ ಕೋಟೆ ಗೋಡೆ ಕುಸಿತ

7

ಕಿತ್ತೂರ ಕೋಟೆ ಗೋಡೆ ಕುಸಿತ

Published:
Updated:
ಕಿತ್ತೂರ ಕೋಟೆ ಗೋಡೆ ಕುಸಿತ

ಚನ್ನಮ್ಮನ ಕಿತ್ತೂರು: ವೀರ ರಾಣಿ ಕಿತ್ತೂರ ಚನ್ನಮ್ಮ ಕೋಟೆಯ ಮುಖ್ಯ ದ್ವಾರದ ಬಳಿ ಸುಮಾರು 10 ಅಡಿ ಅಗಲ ಹಾಗೂ ಸುಮಾರು 11 ಅಡಿ ಉದ್ದದ ಗೋಡೆ ಕುಸಿದ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.ಗೋಡೆಯ ಮಣ್ಣು ಗುಣಮಟ್ಟ ಕಳೆದುಕೊಳ್ಳುತ್ತ ಸಾಗಿದ್ದು ಕೋಟೆಯ ಹೊರ ವಲಯದ ಗೋಡೆೆಯು ಮೇಲಿಂದ ಮೇಲೆ ಬೀಳುತ್ತಲೇ ಸಾಗಿದೆ. ಗೋಡೆ ಬಿದ್ದ ಸ್ಥಳಕ್ಕೆ ಪ್ರಾಚ್ಯವಸ್ತು ಇಲಾಖೆಯ ಉಪನಿರ್ದೇಶಕ ಸ್ವಾಮಿ ಮತ್ತು ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕರಾದ ಸುವರ್ಣಾ ಭೇಟಿ ನೀಡಿ ಪರಿಶೀಲಿಸಿದರು. `ಗೋಡೆಯ ಭಾವಚಿತ್ರಗಳನ್ನು ಮೈಸೂರಿನ ಇಲಾಖೆಯ  ನಿರ್ದೇಶಕರಿಗೆ ಕಳುಹಿಸಿದ್ದೇನೆ. ಅವರ ಆದೇಶ ಬಂದ ನಂತರ ಮುಂದಿನ ಕಾರ್ಯ ಕೈಕೊಳ್ಳಲಾಗುವುದು` ಎಂದು ಸ್ವಾಮಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry