ಶುಕ್ರವಾರ, ಮೇ 7, 2021
21 °C

ಕಿಮ್ಸಗೆ ಇಂದು ತನಿಖಾಧಿಕಾರಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ) ನಡೆದಿದೆ ಎನ್ನಲಾದ ಅವ್ಯ ವಹಾರಗಳ ಬಗ್ಗೆ ತನಿಖೆ ನಡೆಸಲು ನೇಮಕ ಗೊಂಡಿರುವ ನ್ಯಾಯಾಧೀಶ ನಾರಾಯಣ ಅವರು ಶುಕ್ರವಾರ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.ಕಿಮ್ಸನಲ್ಲಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಕೆಲವರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಅವರು ಆಗ ಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಯಾಗಿ ನೇಮಕಗೊಂಡ ನಂತರ ಕೆಲ ತಿಂಗಳ ಹಿಂದೆ ಸಂಸ್ಥೆಗೆ ಭೇಟಿ ನೀಡಿದ್ದ ಅವರು ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ತೆರಳಿದ್ದರು.ನಂತರ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿದ್ದಾರೆ. ವರದಿಯ ಆಧಾರದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ `ಸಿದ್ಧತೆ~ ನಡೆಸುತ್ತಿದೆ.ಇದೇ ಸಂದರ್ಭದಲ್ಲಿ ಇದೀಗ ಮತ್ತೊಂದು ಬಾರಿ ತನಿಖಾಧಿಕಾರಿ ಸಂಸ್ಥೆಗೆ ಆಗಮಿಸಬೇಕಾಗಿ ಬಂದಿದೆ. ಇದಕ್ಕೆ ಕಾರಣ ಸಂಸ್ಥೆಯಿಂದ ಇಲಾಖೆಗೆ ಹೋಗಿದೆ ಎನ್ನಲಾದ ಒಂದು ಪತ್ರ.ಸಂಸ್ಥೆಯಲ್ಲಿ ಅಕ್ರಮ ನೇಮಕಾತಿ ನಡೆದಿದೆ ಅಥವಾ ನಕಲಿ ದಾಖಲೆ ಪತ್ರಗಳನ್ನು ನೀಡಿ ಉದ್ಯೋಗ ಗಿಟ್ಟಿಸಿ ಕೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗಿದೆ.ಈ ಕುರಿತು `ಪ್ರಜಾವಾಣಿ~ ನಾರಾಯಣ ಅವರನ್ನು ಮಾತನಾಡಿಸಿದಾಗ, ತಾವು ಸಂಸ್ಥೆಗೆ ಆಗಮಿಸುತ್ತಿ ರುವುದು ನಿಜ, ನಕಲಿ ಪ್ರಮಾಣ ಪತ್ರಗಳಿಗೆ ಸಂಬಂಧಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ತನಿಖೆ ನಡೆಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡ ಲಾಗುವುದು ಎಂದು ಸ್ಪಷ್ಟಪಸಿದರು.ಶುಕ್ರವಾರ ಒಂದು ದಿನ ಮಾತ್ರ ಪ್ರಮಾಣ ಪತ್ರಗಳನ್ನು ಪರಿಶೀಲಿಸುವುದಾಗಿ ಅವರು ತಿಳಿಸಿದರು. ಆದರೆ ಕಿಮ್ಸನ ಮೂಲಗಳ ಪ್ರಕಾರ ಅವರು ಭಾನು ವಾರದ ವರೆಗೂ ಇಲ್ಲೇ ಇದ್ದು ಸಮಗ್ರ ತನಿಖೆ ನಡೆಸಲಿದ್ದಾರೆ.

ಪತ್ರ ಬರೆದ ಹಿನ್ನೆಲೆಯಲ್ಲಿ ಸಂಸ್ಥೆಯ ಎಲ್ಲ ವಿಭಾಗ ಗಳಲ್ಲೂ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಎಲ್ಲರೂ ಮೂಲ ದಾಖಲೆಗಳನ್ನು ಹಿಡಿದುಕೊಂಡು ಸಿದ್ಧರಾಗಿರಬೇಕು ಎಂದು ಸಿಬ್ಬಂದಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.ಪತ್ರ ಬರೆದವರು ಯಾರು, ಯಾರ ಮೇಲ ಆರೋಪ ಹೊರಿಸಲಾಗಿದೆ ಎಂಬಿತ್ಯಾದಿ ಮಾಹಿತಿ ಕಿಮ್ಸನಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಕೂಡ ಇಲ್ಲ. `ಈ ಕುರಿತು ಯಾರಿಗೂ ನೋಟಿಸ್ ಜಾರಿ ಮಾಡಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಲು ಎ್ಲ್ಲಲರೂ ಸಿದ್ಧ ವಾಗಿರಬೇಕು ಎಂಬ ಮಾಹಿತಿ ಬಂದಿದೆ~ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.ಪತ್ರದಲ್ಲಿ ಸತ್ಯಕ್ಕೆ ಹತ್ತಿರವಾದ ಮಾಹಿತಿಗಳಿದ್ದು ಈ ಕಾರಣದಿಂದಲೇ ತನಿಖಾಧಿಕಾರಿಯನ್ನು ಕಳುಹಿಸ ಲಾಗಿದೆ. ಪತ್ರದಲ್ಲಿ ಅಕ್ರಮವಾಗಿ ಉದ್ಯೋಗ ಗಿಟ್ಟಿಸಿ ಕೊಂಡವರ ಹೆಸರು ಇದ್ದಿರಲೂಬಹುದು. ಅವರ ದಾಖಲೆಗಳ ಪರಿಶೀಲನೆ ಜೊತೆಯಲ್ಲಿ ಇತರರ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇರಬಹುದು ಎಂದು ಸಿಬ್ಬಂದಿ ಹೇಳುತ್ತಾರೆ.`ಪತ್ರ ಪ್ರಕರಣ ಗೊಂದಲದಿಂದ ಕೂಡಿದೆ. ಯಾರು, ಯಾರ ಮೇಲೆ ಆರೋಪ ಹೊರಿಸಿದ್ದಾರೆ ಎಂದು ತಿಳಿದಿಲ್ಲ. ಹೀಗಾಗಿ ಎಲ್ಲರೂ ಆತಂಕ, ಕುತೂಹಲ ದಲ್ಲಿದ್ದಾರೆ~ ಎಂಬುದು ವಿಭಾಗವೊಂದರ ಮುಖ್ಯಸ್ಥರ ಹೇಳಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.