ಶುಕ್ರವಾರ, ಮಾರ್ಚ್ 5, 2021
30 °C

ಕಿಮ್ ಮಗಳ ಫೋಟೋಗೆ 20 ಲಕ್ಷ ಡಾಲರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಮ್ ಮಗಳ ಫೋಟೋಗೆ 20 ಲಕ್ಷ ಡಾಲರ್

ಟಿ.ವಿ. ರಿಯಾಲಿಟಿ ಸ್ಟಾರ್ ಕಿಮ್ ಕರ್ದಾಷಿಯಾನ್ ಮತ್ತು ಆಕೆಯ ಬಾಯ್‌ಫ್ರೆಂಡ್ ಕನೆ ವೆಸ್ಟ್ ಅವರ ಇನ್ನೂ ತಿಂಗಳು ತುಂಬದ ಪುಟ್ಟ ಮಗಳು `ನಾರ್ಥ್ ವೆಸ್ಟ್'ಳ ಫೋಟೋ ಪ್ರಕಟಣೆಗಾಗಿ ನಿಯತಕಾಲಿಕವೊಂದು 20 ಲಕ್ಷ ಅಮೆರಿಕನ್ ಡಾಲರ್ ಹಣದ ಆಫರ್ ಇಟ್ಟಿದೆಯಂತೆ.

ಇದರ ಜೊತೆಗೆ ಕರ್ದಾಷಿಯಾನ್‌ಗೆ  ಕ್ರಿಸ್ ಜೆನ್ನಿರ್ ಅವರು ನಡೆಸಿಕೊಡುವ ಟಾಕ್‌ಶೋನಲ್ಲಿ ಮೊದಲ ಬಾರಿಗೆ ಮಗುವನ್ನು ತೋರಿಸಿಕೊಳ್ಳುವ ಇರಾದೆ ಇದೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಇದರ ಬೆನ್ನಲ್ಲೇ ಕರ್ದಾಷಿಯಾನ್ ತಮ್ಮ ಮಗಳ ಭರ್ಜರಿ ಫೋಟೋ ಶೂಟ್‌ಗೂ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಅಂತರ್‌ಜಾಲತಾಣಗಳಲ್ಲಿ ಓಡಾಡಿತ್ತು.ಆದರೆ, ಈ ಗಾಳಿಸುದ್ದಿಯನ್ನು ಕಿಮ್ ಅಲ್ಲಗಳೆದಿದ್ದಾರೆ. `ಅಂತಹ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ. ನಮ್ಮ ಮಗುವನ್ನು `ಕೀಪಿಂಗ್ ಅಪ್ ವಿತ್ ದಿ ಕರ್ದಾಷಿಯಾನ್ಸ್' ಟಾಕ್‌ಶೋದಲ್ಲಿ ಚಿತ್ರೀಕರಿಸುವ ಬಗ್ಗೆ ಜೆನ್ನರ್ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿರುವ ಕಿಮ್ ಮಗುವಿನ ಶೋಷಣೆಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಜೂನ್ 15ರಂದು ಮಗು ಜನಿಸಿದ್ದು, ಎರಡು ವಾರ ತುಂಬಿದೆಯಷ್ಟೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.