ಬುಧವಾರ, ಜೂನ್ 16, 2021
22 °C

ಕಿಲ್ಲಾಓಣಿ ಕಾಮ–ರತಿಗೆ ‘ಚಿನ್ನ’ದ ಯೋಗ

ಪ್ರಜಾವಾಣಿ ವಾರ್ತೆ/ ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಗದಗ: ನಗರದ ಕಿಲ್ಲಾ ಓಣಿಯ ಕಾಮ–ರತಿಯನ್ನು ಚಿನ್ನಾಭರಣದಿಂದ ಅಲಂಕಾರ ಮಾಡುವ ಮೂಲಕ ಗುರುವಾರ ವಿಶೇಷವಾಗಿ ಹೋಳಿ ಹಬ್ಬ ಆಚರಿಸಲಾಯಿತು.150 ವರ್ಷ ಇತಿಹಾಸ ಹೊಂದಿ ರುವ ನಗರದ ಕಿಲ್ಲಾ ಓಣಿಯಲ್ಲಿ ತ್ರಿಕೂಟೇಶ್ವರ ದೇವಾಲಯದ ಉತ್ತರ ಮಹಾದ್ವಾರದಲ್ಲಿ ಹಬ್ಬಕ್ಕೆ ಐದು ದಿನ ಇರುವಾಗಲೇ ಕಾಮ, ರತಿಯರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಈ ಬಾರಿ ಕಿಲ್ಲಾ ಓಣಿಯ ಕಾಮ, ರತಿ ಮೈ ಮೇಲೆ ಹತ್ತು ಕೆ.ಜಿ. ಚಿನ್ನಾ ಭರಣ ಹಾಕಲಾಗಿತ್ತು. ಬೆಳಿಗ್ಗೆ ಆರಂಭ ಗೊಂಡ ಕಾಮ,ರತಿಯರ ಮೆರವಣಿಗೆ ನಗರದ ಕಿಲ್ಲಾಓಣಿಯಿಂದ ಹಳೇ ಸರಾಫ ಬಜಾರ್‌, ವೀರನಾರಾಯಣ ದೇವಸ್ಥಾನ, ಹನುಮನಗರಡಿ, ಒಕ್ಕಲ ಗೇರಿ ಮೂಲಕ ವಾಪಸ್‌ ಕಿಲ್ಲಾ ತಲು ಪಿತು. ಮೆರವಣಿಗೆಯಲ್ಲಿ ಬಣ್ಣ ಬಳಿದು ಕೊಂಡು, ರಗ್ಗಹಲಿಗೆ ಬಾರಿಸಿಕೊಂಡು ಸಾಗಿದರು.ಮನೆಯ ಚಿನ್ನಾಭರಣಗಳನ್ನು ಕಾಮರತಿಯರಿಗೆ ಹಾಕಿದರೆ ಆರ್ಥಿಕ ವಾಗಿ ಒಳ್ಳೆಯದಾಗುತ್ತದೆ ಎಂಬ ಪದ್ಧತಿ ನಡೆದುಕೊಂಡು ಬಂದಿದೆ. ಹೀಗಾಗಿ ಗದಗ ಜಿಲ್ಲೆಯಲ್ಲದೇ ನೆರೆಯ ಹಾವೇರಿ, ಬಳ್ಳಾರಿ, ಕೊಪ್ಪಳ, ಬಾಗಲ ಕೋಟೆ, ವಿಜಾಪುರ ಜಿಲ್ಲೆ ಗಳಿಂದಲೂ ಆಗಮಿಸಿದ್ದ ಭಕ್ತರು ಚಿನ್ನಾಭರಣ ಗಳನ್ನು ಮನೆಯಿಂದ ತಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನೀಡಿದರು.ರತಿದೇವಿಗೆ ಬಂಗಾರದ ಸರ ಹಾಕಿ ಪೂಜೆ ಸಲ್ಲಿಸಿದರೆ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಆಗುತ್ತದೆ ಎಂಬ ನಂಬಿಕೆ ಇದೆ. ಮದುವೆಯಾಗದ ಯುವಕರು ರತಿಗೆ ಕಂಕಣ ಕಟ್ಟಿದರೆ, ಯುವತಿಯ ರು ರತಿದೇವಿಗೆ ಊಡಿ ತುಂಬಿ ಕಾಮ ನಿಗೆ ಕಂಕಣ ಕಟ್ಟಿ ಬೇಡಿಕೊಳ್ಳುತ್ತಾರೆ.ಮೆರವಣಿಗೆಯ ಹಿಂದಿನ ದಿನ ಸಾರ್ವಜನಿಕರಿಂದ ಸಂಗ್ರಹಿಸುವ ಆಭರಣಗಳ ಮೇಲೆ ವಾರಸುದಾರರ ಹೆಸರನ್ನು ಚೀಟಿಯಲ್ಲಿ ಬರೆಯಲಾಗು ತ್ತದೆ. ಮೆರವಣಿಗೆ ಮುಗಿದ ಮಾರನೇ ದಿನ ವಾರಸುದಾರರಿಗೆ ಆಭರಣ ಗಳನ್ನು ಮರಳಿ ನೀಡಲಾಗುತ್ತದೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾ ಗಿತ್ತು.‘ಈ ಉತ್ಸವ ಮೂರ್ತಿಗಳಿಗೆ ‘ಸರ್ಕಾರಿ ಕಾಮಣ್ಣ’ ಎಂಬ ಹೆಸರು ಇದೆ. ಬಹಳ ಹಿಂದಯೇ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಕಲಾವಿದರಿಂದ ಈ ಮೂರ್ತಿಗಳನ್ನು ಮಾಡಿಸಿಕೊಂಡು ತರ ಲಾಗಿದೆ. ಹತ್ತು ವರ್ಷಕ್ಕೊಮ್ಮೆ ಮೂರ್ತಿಗಳಿಗೆ ಬಣ್ಣ ಬಳಿಯಲಾಗು ತ್ತದೆ’ ಎನ್ನುತ್ತಾರೆ ಓಣಿಯ ಹಿರಿಯ ವೆಂಕಟೇಶ ಖಟವಟೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.