ಭಾನುವಾರ, ಮಾರ್ಚ್ 7, 2021
29 °C

ಕೀರ್ತಿಲಾಲ್‌ನಿಂದ ಅಗ್ಗದ ಬೆಲೆಯ ವಜ್ರದ ನೆಕ್ಲೇಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀರ್ತಿಲಾಲ್‌ನಿಂದ ಅಗ್ಗದ ಬೆಲೆಯ ವಜ್ರದ ನೆಕ್ಲೇಸ್‌

ಬೆಂಗಳೂರು:  ವಜ್ರ ಮತ್ತು ಚಿನ್ನದ ಆಭರಣ ತಯಾರಿಕಾ ಸಂಸ್ಥೆ  ಕೀರ್ತಿಲಾಲ್‌ ತನ್ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಸಾಂಪ್ರದಾಯಿಕ ವಿನ್ಯಾಸದ ಹಾಗೂ ವಿಭಿನ್ನ ಶೈಲಿಯ ಆಭರಣ ಪ್ರದರ್ಶನ ಏರ್ಪಡಿಸಿತ್ತು.ಹೊಸ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ವಜ್ರದ ನೆಕ್ಸೇಸ್‌ಗಳನ್ನು ಧರಿಸಿದ್ದ ರೂಪದರ್ಶಿಯರು ಆಭರಣ ಪ್ರದರ್ಶಿಸಿದರು.

‘ವಜ್ರದ ಆಭರಣಕ್ಕಿಂತ ಚಿನ್ನಾಭರಣ ದರ ಅಗ್ಗ ಎಂಬ ಗ್ರಹಿಕೆ ಗ್ರಾಹಕರಲ್ಲಿದೆ. ಆದರೆ, ಚಿನ್ನದ ನೆಕ್ಲೇಸ್‌ಗಿಂತ ಕಡಿಮೆ ಬೆಲೆಯಲ್ಲಿ ವಜ್ರದ ನೆಕ್ಲೇಸ್‌ಗಳನ್ನು ಖರೀದಿಸಬಹುದು.ನಮ್ಮ ಸಂಸ್ಥೆಯ ಮಳಿಗೆಗಳಲ್ಲಿ  ₹ 77 ಸಾವಿರ ಆರಂಭಿಕ ಬೆಲೆಯಲ್ಲಿ ವಜ್ರದ  ನೆಕ್ಲೇಸ್‌ಗಳು ಲಭ್ಯ ಇವೆ. ಸಂಸ್ಥೆಯ ಆಭರಣಗಳನ್ನು ಆನ್‌ಲೈನ್‌ ಮೂಲಕ  ಮಾರಾಟ ನಡೆಸಲು  ಚಿಂತನೆ ನಡೆಸಲಾಗುತ್ತಿದೆ’ ಎಂದು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅರುಣ್‌ ಕುಮಾರ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.