ಗುರುವಾರ , ಜೂನ್ 17, 2021
22 °C

ಕೀಳರಿಮೆ, ಭಾಷಾ ಗೊಂದಲದಿಂದ ಪ್ರತಿಭೆಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: `ಪ್ರತಿಭೆಗೆ ಭಾಷೆ ಮುಖ್ಯ ಅಲ್ಲ. ಭಾಷೆ ಮಾಧ್ಯಮ ಮಾತ್ರ. ಕೀಳರಿಮೆ, ಭಾಷಾ ಗೊಂದಲದಿಂದ ಪ್ರತಿಭೆಯು ಕುಗುತ್ತದೆ~ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕೆ. ಹರೀಶ್ ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಗುರುವಾರ ನಡೆದ ಆಹ್ವಾನಿತ ತಂಡಗಳ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಕನಸುಗಳ ಕುಣಿತ `ಅಪೂರ್ವ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಎಲ್ಲಾ ಪ್ರತಿಭಾವಂತರು ಹಳ್ಳಿ ಯಿಂದಲೇ ಬಂದವರು. ಶಿಸ್ತು ಸರಳತೆಯಿಂದ ಜೀವನಕ್ಕೆ ವೈಭವದ ಕಳೆ ಬರುತ್ತದೆ ಹಾಗಾಗಿ ಪ್ರಾಮಾಣಿಕತೆಗೆ ಶಿಕ್ಷಣ ಮುಖ್ಯವಲ್ಲ. ಸಮಾಜದಲ್ಲಿ ಮುಖ್ಯವಾಗಿ ತೊಡಗಿಸಿಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯವಾಗುತ್ತದೆ~ ಎಂದರು.`ಜೀವನದಲ್ಲಿ ಕೊನೆಗೆ ಉಳಿಯು ವುದು ಸ್ನೇಹಾ ಸಂಬಂಧ ಪ್ರೀತಿ ಮಾತ್ರವೇ ಹೊರತು ಅಧಿಕಾರ, ಅಂತಸ್ತು, ಹಣ, ಆಡಂಬರ, ಆಸ್ತಿ ಯಾವುದೂ ಅಲ್ಲ. ಹಾಗಾಗಿ ಈಗ ಒತ್ತಡದ ನಡುವೆಯೂ ಬೆರೆಯುವ ಮನಸ್ಸು ಮಾಡಿದ್ದೇನೆ~ ಎಂದು ಹಿಂದೆ ಹೆಬ್ರಿಯಲ್ಲಿಉಪನ್ಯಾಸಕರಾಗಿದ್ದ ಅವರು ಹೇಳಿದರು.ಪ್ರಾಂಶುಪಾಲ ಪ್ರೊ.ಮಲಯಯ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಮಡಾಮಕ್ಕಿ ಶಶಿಧರ ಶೆಟ್ಟಿ,ಶೃಂಗೇರಿ ಆದಿತ್ಯ ಕೃಷ್ಣಮೂರ್ತಿ, ಉಪನ್ಯಾಸಕ ಎಚ್.ಎ.ಗಣಪತಿ, ಕಾರ್ಯಕ್ರಮಗಳ ಸಂಘಟಕರಾದ ಶರಣ್, ಸಂತೋಷ ಶೆಟ್ಟಿ, ತೀರ್ಪುಗಾರರಾದ ಆಕಾಶವಾಣಿ ಕಲಾವಿದ ಗಣೇಶ್ ಗಂಗ್ಗೋಳ್ಳಿ, ದಿವಾಕರ್ ಕಟೀಲ್, ಸುಜಾಂತ್ ಜೆ, ಶಾಂತಿ, ವಿದ್ಯಾರ್ಥಿ ಪ್ರಮುಖರಾದ ಅಜಿತ್, ಅನುಷಾ ವಿ.ಜೆ.ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.