ಮಂಗಳವಾರ, ಮೇ 18, 2021
30 °C

ಕುಂವೀ ಪ್ರಶಸ್ತಿಗೆ ಕಲಿಗಣನಾಥ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸಪೇಟೆಯ ಕುಂವೀ ಪ್ರತಿಷ್ಠಾನ ಮೊದಲ ಬಾರಿಗೆ ಕೊಡುತ್ತಿರುವ ರಾಜ್ಯಮಟ್ಟದ ಕುಂವೀ ಪ್ರಶಸ್ತಿಗೆ ಕಥೆಗಾರ ಕಲಿಗಣನಾಥ ಗುಡದೂರು ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು ಪಾರಿತೋಷಕ, 25 ಸಾವಿರ ರೂ. ನಗದು, ಫಲಕವನ್ನು ಒಳಗೊಂಡಿದ್ದು, ಅಕ್ಟೋಬರ್‌ನಲ್ಲಿ ಪ್ರದಾನ ಮಾಡಲಾಗುವುದು.

 

ಪ್ರತಿಷ್ಠಾನದ ಗೌರವ ಸಮಿತಿಯ ಸಲಹೆಗಾರರಾದ ಡಾ.ಬಸವರಾಜ ಮಲಶೆಟ್ಟಿ, ಪ್ರೊ.ಇಟಗಿ ಈರಣ್ಣ,  ಪ್ರೊ.ಯು.ರಾಘವೇಂದ್ರರಾವ್,  ಡಾ.ಮೃತ್ಯುಂಜಯ ರುಮಾಲೆ, ಡಿ.ಎನ್.ಸುಜಾತಾ ಅವರು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು. ಆಯ್ಕೆ ಪ್ರಕ್ರಿಯೆಯಲ್ಲಿ ನಾಡಿನ 11 ವಿದ್ವಾಂಸರು ಪಾಲ್ಗೊಂಡಿದ್ದರು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ.ಯ.ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.