ಕುಖ್ಯಾತ ಮಾರುಕಟ್ಟೆ ಪಟ್ಟಿಯಲ್ಲಿ ನವದೆಹಲಿಯ ನೆಹರೂ ಪ್ಲೇಸ್
ವಾಷಿಂಗ್ಟನ್ (ಪಿಟಿಐ): ಸಾಫ್ಟ್ವೇರ್ ಸೇರಿದಂತೆ ನಕಲಿ ಇಲೆಕ್ಟ್ರಾನಿಕ್ ವಸ್ತುಗಳಿಗೆ ಖ್ಯಾತಿ ಹೊಂದಿದ ನವದೆಹಲಿಯ ‘ನೆಹರೂ ಪ್ಲೇಸ್’ ವಿಶ್ವದ ಅತ್ಯಂತ ಕುಖ್ಯಾತ ಮಾರುಕಟ್ಟೆ ಎಂದು ಅಮೆರಿಕ ತಿಳಿಸಿದೆ. ಅಮೆರಿಕದ ವ್ಯವಹಾರ ಪ್ರತಿನಿಧಿಗಳ ಕಚೇರಿ (ಯುಎಸ್ಟಿಆರ್) ಸಿದ್ಧಪಡಿಸಿದ ಪಟ್ಟಿಯಲ್ಲಿ ಇದನ್ನು ನಮೂದಿಸಲಾಗಿದ್ದು ಇಂಥದ್ದೇ 30 ಮಾರುಕಟ್ಟೆಗಳನ್ನು ಈ ಪಟ್ಟಿಯಲ್ಲಿ ಸೇರಿಸಿದೆ. ವೆಬ್ಸೈಟ್ಗಳ ಹೆಸರುಗಳೂ ಈ ಪಟ್ಟಿಯಲ್ಲಿ ಒಳಗೊಂಡಿದೆ.
ನಕಲಿ ಸಾಫ್ಟ್ವೇರ್, ಆಪ್ಟಿಕಲ್ ಮೀಡಿಯಾಗಳನ್ನು ಮಾರಾಟ ಮಾಡುವಂತಹ ಹಲವು ಮಾರುಕಟ್ಟೆಗಳು ಭಾರತದ ಹಲವು ನಗರಗಳಲ್ಲಿದ್ದು ‘ನೆಹರು ಪ್ಲೇಸ್’ ಇಂಥದ್ದೇ ಒಂದು ಮಾರುಕಟ್ಟೆಯಾಗಿದೆ ಎಂದು ಯುಎಸ್ಟಿಆರ್ ಸೋಮವಾರ ಬಹಿರಂಗಪಡಿಸಿದ ವರದಿಯಲ್ಲಿ ತಿಳಿಸಿದೆ. ಚೀನಾದ ಖ್ಯಾತ ವೆಬ್ಸೈಟ್ ಬೈಡು, ಬೀಜಿಂಗ್ನ ಸಿಲ್ಕ್ ಮಾರುಕಟ್ಟೆ, ಪಾಕಿಸ್ತಾನದ ಉರ್ದು ಬಜಾರ್ ಮತ್ತು ಥಾಯ್ಲೆಂಡ್ನ ರೆಡ್ ರೆನ್ ಶಾಪಿಂಗ್ ಪ್ರದೇಶಗಳು ಕೂಡ ಪಟ್ಟಿಯಲ್ಲಿ ಸೇರಿವೆ. ಬೈಡು ವೆಬ್ಸೈಟ್ನಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡಿದಲ್ಲಿ ಗ್ರಾಹಕನಿಗೆ ಅಗತ್ಯವಾದ ಸಾಧನಗಳು ಎಲ್ಲಿ ದೊರೆಯುತ್ತವೆ ಎಂಬ ಮಾಹಿತಿ ಲಭ್ಯ ಎಂದು ವರದಿ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.