ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರವು ಐದು ದಶಕಗಳಿಂದ ಕಾಂಗ್ರೆಸ್ನ ಭದ್ರಕೋಟೆ. 1957ರಿಂದ 2009 ರ ವರೆಗೆ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 12 ಬಾರಿ ಗೆಲುವು ಸಾಧಿಸಿದೆ. 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಆರ್.ವಿ ನಾಯಕ, 1996ರಲ್ಲಿ ಜನತಾದಳದ ರಾಜಾ ರಂಗಪ್ಪ ನಾಯಕ ಕಾಂಗ್ರೆಸ್ ಭದ್ರಕೋಟೆ ಭೇದಿಸಿದ್ದರು.

1998ರ ಬಳಿಕ ಮತ್ತೆ ಗೆದ್ದು ಅಧಿಕಾರದ ಗದ್ದುಗೆ ಏರಿ ಕುಳಿತಿದ್ದ ಕಾಂಗ್ರೆಸ್ ಪಕ್ಷವನ್ನು 2009 ರಲ್ಲಿ ಸೋಲಿಸುವ ಮೂಲಕ ಈ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಳ್ಳಾರಿ ಮೂಲದ (ಮಾಜಿ ಸಚಿವ ಬಿ ಶ್ರೀರಾಮುಲು ಅವರ ಸೋದರ ಸಂಬಂಧಿ) ಎಸ್.ಫಕ್ಕೀರಪ್ಪ 30 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದರು.

ಹೊರಗಿನಿಂದ ಬಂದವರು ಹೇಗೆ ಗೆಲ್ಲಬಹುದು ಎಂಬುದನ್ನು ಕ್ಷೇತ್ರದ ರಾಜಕಾರಣಿಗಳಿಗೆ ತೋರಿಸಿಕೊಟ್ಟರು. ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಇದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಎರಡು ಕುಟುಂಬಗಳ ಪೈಪೋಟಿ: ಈ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಗೊಂಡಿದ್ದ ದೇವದುರ್ಗ ತಾಲ್ಲೂಕು ಅರಕೇರಿ ಗ್ರಾಮದ ವೆಂಕಟೇಶ ನಾಯಕ ಈಗ ದೇವದುರ್ಗ ವಿಧಾನಸಭಾ ಕ್ಷೇತ್ರದ ಸದಸ್ಯರು.2008ರ ದೇವದುರ್ಗ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವನಗೌಡ ನಾಯಕ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿ.ವಿ ನಾಯಕ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಹರಸಾಹಸ ನಡೆಸಿದ್ದಾರೆ. ಅವರು ವೆಂಕಟೇಶ ನಾಯಕರ ಮಗ.

2013ರ ವಿಧಾನ ಸಭಾ ಚುನಾವಣೆಯಲ್ಲಿ ವೆಂಕಟೇಶ ನಾಯಕ ಅವರಿಂದ ಪ್ರಥಮ ಬಾರಿಗೆ ಸೋಲಿನ ರುಚಿ ಕಂಡ ಅದೇ ಅರಕೇರಿ ಗ್ರಾಮದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಈಗ ಬಿಜೆಪಿ ಅಭ್ಯರ್ಥಿ. ವಿಶೇಷ ಎಂದರೆ ವೆಂಕಟೇಶ ನಾಯಕ ಅವರು ಸಂಬಂಧದಲ್ಲಿ (ವೆಂಕಟೇಶ ನಾಯಕರ ತಂದೆ ಹಾಗೂ ಶಿವನಗೌಡ ನಾಯಕರ ಅಜ್ಜ ಸೋದರ ಸಂಬಂಧಿಗಳು) ಶಿವನಗೌಡ ನಾಯಕರಿಗೆ ಅಜ್ಜ.

ಈಗೇನಾದರೂ ಕಾಂಗ್ರೆಸ್ ಟಿಕೆಟ್ ಬಿ.ವಿ. ನಾಯಕರಿಗೆ ಸಿಕ್ಕಿದರೆ ಈ ಕ್ಷೇತ್ರ ‘ಅಳಿಯ ಮತ್ತು ಮಾವನ’ ಕದನ ಕಾಣಲಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣೆ ಅಬ್ಬರ, ಆರ್ಭಟ ಕಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಕುಟುಂಬದವರೇ ಪ್ರಬಲ ಅಭ್ಯರ್ಥಿಗಳೆಂದು ಪರಿಗಣಿಸಿವೆ.

2008ರಲ್ಲಿ ದೇವದುರ್ಗ ವಿಧಾನಸಭಾ ಉಪ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದವರೇ ಐದು ವರ್ಷಗಳ ಬಳಿಕ ಮತ್ತೆ ಲೋಕಸಭಾ ಕ್ಷೇತ್ರದಲ್ಲಿ ತೊಡೆತಟ್ಟುವಂತಾಗಲಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಈವರೆಗೂ ಆವರಿಸಿಕೊಂಡಿದ್ದ ಎರಡೂ ಕುಟುಂಬಗಳ ಬದ್ಧ ವೈಷಮ್ಯದ ರಾಜಕಾರಣ ಈ ಮೂಲಕ ಲೋಕಸಭಾ ಕ್ಷೇತ್ರಕ್ಕೆ ‘ವರ್ಗಾವಣೆ’ ಆಗುವ ಸಾಧ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.