ಶನಿವಾರ, ಮೇ 8, 2021
26 °C

ಕುಟುಂಬಶ್ರೀ ಯೋಜನೆಯತ್ತ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಕೇರಳದ `ಕುಟುಂಬಶ್ರೀ ಯೋಜನೆ~ಯನ್ನು ಅನನ್ಯ ಎಂದು ಬಣ್ಣಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಇದೇ ಮಾದರಿಯನ್ನು ಇತರ ರಾಜ್ಯಗಳಲ್ಲೂ ಪುನರಾವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

 

ಕುಟುಂಬಶ್ರೀ ಯೋಜನೆ ಮಹಿಳೆಯರನ್ನು ಗ್ರಾಮ ಸಭೆಗೆ ಕರೆತರುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಬಡವರ ಅವಶ್ಯಕತೆಗಳ ಬಗ್ಗೆ ಸ್ಥಳೀಯ ಮಟ್ಟದ ಸರ್ಕಾರಗಳ ಗಮನ ಸೆಳೆಯುತ್ತಿವೆ. ಪಂಚಾಯತ್ ರಾಜ್ ಯೋಜನೆಗೆ ಸಂಪೂರ್ಣ ಅನುಕೂಲಕರವಾದ ಸ್ವ ಸಹಾಯ ಸಂಘ ಇದಾಗಿದೆ ಎಂದು ಅವರು ವಿಚಾರಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.