ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸಿಸುತ್ತಿ ರುವ 350 ಕುಟುಂಬಗಳಿಗೆ ಪರಿಹಾರ ನೀಡಿ ಸ್ಥಳಾಂತರಿಸಲು ಕೇಂದ್ರ ಸರ್ಕಾರ 35 ಕೋಟಿ ರೂ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಚನ್ನಪ್ಪಗೌಡ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ ಗರಿಷ್ಠ 10 ಲಕ್ಷ ರೂ ಪರಿಹಾರ ದೊರಕುವ ಸಾಧ್ಯತೆ ಇದೆ. ಪರಿಹಾರದ ಮೊತ್ತ ವನ್ನು ಕುಟುಂಬ ಹೊಂದಿರುವ ಆಸ್ತಿಯನ್ನು ಆಧರಿಸಿ ನಿಗದಿಪಡಿಸಲಾಗುವುದು ಎಂದರು.

ಉದ್ಯಾನದಿಂದ ಯಾವುದೇ ಕುಟುಂಬವನ್ನು ಬಲವಂತರವಾಗಿ ಹೊರಗೆ ತರುವ ಆಲೋಚನೆ ಜಿಲ್ಲಾಡಳಿತಕ್ಕೆ ಇಲ್ಲ. ಸ್ವಯಂ ಪ್ರೇರಣೆಯಿಂದ ಹೊರಗೆ ಬರಲು ಇಚ್ಛಿಸುವ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗುವುದು. ಸರ್ಕಾರ ನಗದು ಪರಿಹಾರವನ್ನು ಮಾತ್ರ ನೀಡುತ್ತದೆ. ಈ ಹಣದಿಂದ ಕುಟುಂಬಗಳು ಜಮೀನು ಖರೀದಿಸಬಹುದಾಗಿದೆ ಎಂದು ಅವರು ನುಡಿದರು.

ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಸುಮಾರು 1200 ಕುಟುಂಬಗಳು ವಾಸವಾಗಿವೆ. ಸ್ವ ಇಚ್ಛೆಯಿಂದ ಹೊರಗೆ ಬರುವ ಕುಟುಂಬಗಳ ಸ್ಥಳಾಂತರದ ಬಗ್ಗೆ ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್ಓ ಅವರೊಂದಿಗೆ ಚರ್ಚಿಸಿದ ನಂತರ ಪ್ರಸ್ತಾವನೆ ತಯಾರಿಸ ಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕೆಮ್ಮಣ್ಣುಗುಂಡಿ: ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿ ಕೃಷ್ಣರಾಜೇಂದ್ರ ಗಿರಿಧಾಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 49.5 ಕೋಟಿ ರೂ ಬಿಡುಗಡೆ ಮಾಡಿದೆ. ಈ ಹಣ ಬಳಸಿ ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರಿಗೆ ಹಲವು ಸೌಕರ್ಯ ಒದಗಿಸಲಾ ಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.