ಮಂಗಳವಾರ, ಮಾರ್ಚ್ 2, 2021
29 °C

ಕುರ್ಚಿ, ಟಿ.ವಿ ಖರೀದಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರ್ಚಿ, ಟಿ.ವಿ ಖರೀದಿಸಲು ನಿರ್ಧಾರ

ರಿಯೊ ಡಿ ಜನೈರೊ (ಪಿಟಿಐ):   ಒಲಿಂ ಪಿಕ್‌ ಕ್ರೀಡಾಗ್ರಾಮದಲ್ಲಿ ಟಿ.ವಿ ಸೆಟ್‌ ಮತ್ತು ಕುರ್ಚಿಗಳ ಕೊರತೆ ಇವೆ ಆದ್ದ ರಿಂದ ಇವುಗಳನ್ನು ನೀಡಬೇಕೆಂದು ಮಾಡಿಕೊಂಡಿದ್ದ ಮನವಿಗೆ ಸಂಘಟ ಕರು ಸ್ಪಂದಿಸದ ಕಾರಣ ಭಾರತ ತಂಡ ಇವುಗಳನ್ನೆಲ್ಲಾ ಹೊಸದಾಗಿ ಖರೀದಿ ಸಲು ಮುಂದಾಗಿದೆ.ಎದುರಾಳಿ ತಂಡದ ಹಾಕಿ ಪಂದ್ಯ ಗಳನ್ನು ನೋಡಲು ನಮಗೆ  ಕೆಲ ಟಿ.ವಿ ಸೆಟ್‌ಗಳ ಅಗತ್ಯವಿದೆ.  ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಇಲ್ಲಿರುವ ಕುರ್ಚಿಗಳಲ್ಲಿ ಆಟಗಾರರು ಕುಳಿತರೆ ಬೆನ್ನು ನೋವು ಬರುವ ಸಾಧ್ಯತೆ ಯಿದೆ ಎಂದು ಭಾರತ ಹಾಕಿ ತಂಡದ ಮುಖ್ಯ ಕೋಚ್‌ ರೋಲಂಟ್‌ ಓಲ್ಟಮಸ್‌ ದೂರಿದ್ದರು. ಈ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು  ಚೆಫ್‌ ಡಿ ಮಿಷನ್‌ ರಾಕೇಶ್‌ ಗುಪ್ತಾ ಅವರಿಗೆ ಪತ್ರ ಕೂಡ ಬರೆದಿದ್ದರು.‘ಸೌಲಭ್ಯಗಳನ್ನು ಒದಗಿಸುವಂತೆ ಓಲ್ಟಮಸ್‌ ಅವರು ಮಾಡಿಕೊಂಡಿದ್ದ ಮನವಿಗೆ ಒಲಿಂಪಿಕ್‌ ಸಂಘಟಕರು ಸ್ಪಂದಿಸಿಲ್ಲ. ಆದ್ದರಿಂದ ನಾವೇ ಟಿ.ವಿ ಸೆಟ್‌ಗಳನ್ನು ಖರೀದಿಸಲು ನಿರ್ಧರಿಸಿ ದ್ದೇವೆ’ ಎಂದು ಗುಪ್ತಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಖರೀದಿಸಿ: ನಿಮ್ಮ ಬೇಡಿಕೆಗೆ ತಕ್ಕಂತೆ ಸೌಲಭ್ಯಗಳನ್ನು ಕೊಡಲು ಆಗುವುದಿಲ್ಲ ಎಂದು ಸಂಘಟಕರ ಪ್ರತಿನಿಧಿಯೊಬ್ಬರು  ಹೇಳಿದ್ದಾರೆ.

‘ಚೆಫ್‌ ಡಿ ಮಿಷನ್ ಅವರು ತಂಗುವ ಕೊಠಡಿಯಲ್ಲಿ ಟಿ.ವಿ ಸೌಲಭ್ಯವಿದೆ. ಟಿ.ವಿಗಳನ್ನು ಇಡಲೆಂದೇ ಪ್ರತ್ಯೇಕ ಸೌಲಭ ಮಾಡಿದ್ದೇವೆ.ಅಂತರರಾಷ್ಟ್ರೀಯ ಒಲಿಂಪಿಕ್‌ ಕೌನ್ಸಿಲ್‌ (ಐಒಸಿ) ನಿಯಮಗಳ ಅನ್ವಯವೇ ಕುರ್ಚಿ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ನಿಮಗೆ ಬೇಕಾದರೆ ಖರೀದಿಸಿ’ ಎಂದು ಆ ಪ್ರತಿನಿಧಿ ತಿಳಿಸಿದ್ದಾರೆ.ಭಾರತದ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಗುಪ್ತಾ ‘ನಿಮಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಪ್ರತಿ ಮಹಡಿಗೂ ಟಿವಿ ಸೆಟ್‌ ಮತ್ತು ಹೆಚ್ಚುವರಿ ಕುರ್ಚಿಗಳನ್ನು  ಖರೀದಿಸಲಿದ್ದೇವೆ. ಇದಕ್ಕಾಗಿ ಇಲ್ಲಿರುವ ಭಾರತದ ರಾಯಭಾರಿ ಕಚೇರಿಯ ನೆರವು ಪಡೆದಿದ್ದೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.