ಕುಷ್ಟಗಿ: ಬೇಸಿಗೆ ಸಂದರ್ಭದಲ್ಲಿ ಪಟ್ಟಣದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಮತೆ ನಿಗಾ ವಹಿಸಲು ಪುರಸಭೆ ಎಂಜಿನಿಯರ್ರು ಮತ್ತು ಸಿಬ್ಬಂದಿಗೆ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸೂಚಿಸಲಾಯಿತು.

ಅಧ್ಯಕ್ಷೆ ಕಾಳಮ್ಮ ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಪುರಸಭೆ ಸದಸ್ಯರು, ಸರಿಯಾದ ಸಮಯ ಪ್ರಜ್ಞೆಯಿಂದ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಆದರೆ ಬೇಜವಾಬ್ದಾರಿಯಿಂದ ವರ್ತಿಸದಂತೆ ತಾಕೀತು ಮಾಡಿದರು.

ಅಗತ್ಯ ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ, ಆದರೆ ಬೇಜವಾಬ್ದಾರಿ ಸಿಬ್ಬಂದಿಯಿಂದಾಗಿ ಕೃತಕ ಅಭಾವ ಸೃಷ್ಟಿಯಾಗಿದೆ. ರಾತ್ರಿ 10ಗಂಟೆ ವೇಳೆಗೆ ಪಂಪ್ ಮಾಡುವ ಸ್ಥಳಕ್ಕೆ ಹೋದರೆ ಮೋಟರ್ ಚಾಲೂ ಮಾಡದ ನಿಯೋಜಿತ ಸಿಬ್ಬಂದಿ ಗೊರಕೆ ಹೊಡೆಯುತ್ತಿದ್ದ ದೃಶ್ಯ ಕಂಡುಬಂದಿತು, ಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಪಟ್ಟಣದ ಜನರಿಗೆ ಸಾಕಷ್ಟು ನೀರು ಕೊಡಲು ಸಾಧ್ಯವಿದೆ ಎಂದು ಶಾಸಕ ಹೇಳಿದರು.

ನೀರು ನಿರ್ವಹಣೆ ಕುರಿಂತೆ ಸದಸ್ಯರನ್ನೊಳಗೊಂಡ ಐದು ಜನರ ಸಮಿತಿ ರಚಿಸಬೇಕು, ವಾರದಲ್ಲಿ ಎರಡು ದಿನ ಅಧ್ಯಕ್ಷರು ನೀರು ಪಂಪ್ ಮಾಡುವ ಕೇಂದ್ರಗಳಿಗೆ ಭೇಟಿ ನೀಡಬೇಕು, ಅದಕ್ಕಾಗಿ ಕಾರು ಬಾಡಿಗೆ ಪಡೆಯುವದಕ್ಕೆ ಸಭೆ ಒಪ್ಪಿಗೆ ನೀಡಿತು.

ಎರಡು ವಾರ್ಡ್ಗಳಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಹತ್ತಾರು ಅಕ್ರಮ, ಅನಧಿಕೃತ ನಲ್ಲಿ ಸಂಪರ್ಕಗಳು ಪತ್ತೆಯಾಗಿದ್ದು ಅವುಗಳನ್ನು ಬಂದ್ ಮಾಡಲಾಗಿದೆ. ಇದೇ ರೀತಿ ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ಪತ್ತೆ ಕಾರ್ಯ ನಡೆಸಿ ಕಡಿವಾಣ ಹಾಕಿದರೆ ಅರ್ಧದಷ್ಟು ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಕೆಲ ಸದಸ್ಯರು ಸಲಹೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕೆಲಸ ನಡೆದಿರುವುದರಿಂದ ಕೃಷ್ಣಾ ನದಿಯಿಂದ ಪೂರೈಕೆಯಾಗುವ ನೀರಿನ ಕೊಳವೆಗಳನ್ನು ಬದಲಾಯಿಸಬೇಕಿದ್ದು ರೂ 13 ಕೋಟಿ ವೆಚ್ಚದಲ್ಲಿ ಒಟ್ಟು 16 ಕಿಮೀ ಪೈಪ್ಗಳನ್ನು ಹೆದ್ದಾರಿ ಪ್ರಾಧಿಕಾರಿದವರೆ ಬದಲಾಯಿಸಲಿದ್ದಾರೆ. ಅಲ್ಲದೇ ಹಳೆಯ ಪೈಪ್ಗಳನ್ನು ಹಾಕುತ್ತಿಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್ರು ಸಭೆಗೆ ವಿವರಿಸಿದರು.

ಪುರಸಭೆ ಮಂಡಳಿಗೆ ಬಾಕಿ ಉಳಿಸಿಕೊಂಡಿರುವ ರೂ 15 ಲಕ್ಷ ನಿರ್ವಹಣೆ ವೆಚ್ಚದಲ್ಲಿ ರೂ 9 ಲಕ್ಷ ಪಾವತಿಸಲು ಸಮ್ಮತಿ ನೀಡಲಾಯಿತು. ಅಲ್ಲದೇ ಕೃಷ್ಣಾ ಯೋಜನೆಯನ್ನು ಪುರಸಭೆಗೆ ವಹಿಸುವಂತೆ ಮಂಡಳಿ ಅಧಿಕಾರಿಗಳಿಗೆ ಸಭೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.