ಹುಬ್ಬಳ್ಳಿ: ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರ ಮಿದುಳಿನ ಎಡಭಾಗಕ್ಕೆ ಇಲ್ಲಿಯ ಸುಶ್ರುತಾ ಆಸ್ಪತ್ರೆಯ ವೈದ್ಯರು ಕೃತಕ ತಲೆಬುರುಡೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯ ಡಾ.ಮಿಥುನ್ ಜಿ.ಸತ್ತೂರ, `ಆರು ತಿಂಗಳ ಹಿಂದೆ ಕೃಷ್ಣ (ಹೆಸರು ಬದಲಾಯಿಸಲಾಗಿದೆ) ಎಂಬುವವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸ್ವಿಟ್ಜರ್ಲೆಂಡ್ನಿಂದ ತರಿಸಿದ `ಪಾಲಿ ಇಥ್ವಾಲ್ ಇಥರ್ ಕಿಟೋನ್~ (ಪೀಕ್) ಎಂಬ ಪಾಲಿಮರ್ ವಸ್ತುವಿನಿಂದ ತಯಾರಿಸಲಾದ ಕೃತಕ ತಲೆಬುರುಡೆಯ ಭಾಗವನ್ನು ಎಡಗಡೆ ಜೋಡಿಸಲಾಗಿದೆ.. ಈ ಶಸ್ತ್ರಚಿಕಿತ್ಸೆ ದೇಶದಲ್ಲಿಯೇ ಪ್ರಥಮ ಬಾರಿಗೆ ನಡೆದಿದೆ~ ಎಂದು ಹೇಳಿದರು.

`ಈ ಕೃತಕ ತಲೆಬುರುಡೆಗೆ 2.5 ಲಕ್ಷ ರೂಪಾಯಿ ವೆಚ್ಚವಾಗಿದೆ. ಸಾಮಾನ್ಯ ತಲೆಬುರುಡೆಯಂತೆಯೇ ಇದು ಹೊಂದಿಕೊಂಡಿದೆ. ಇದನ್ನು ಪಿನ್ ಹಾಗೂ ಸ್ಕ್ರೂಗಳಿಂದ ಜೋಡಿಸ ಲಾಗಿದೆ~ ಎಂದು ಅವರು ನುಡಿದರು. `2009ರಲ್ಲಿಯೇ ತಲೆಯ ಎಡಭಾಗಕ್ಕೆ ತೀವ್ರ ಗಾಯವಾದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ತೀವ್ರವಾಗಿ ವಾಂತಿ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು. ಅಂದೇ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ, ಶೇ 80ರಷ್ಟು ಹಾನಿಗೊಳಗಾಗಿದ್ದ ತಲೆಭಾಗವನ್ನು ತೆಗೆಯಲಾಯಿತು.

ಸ್ವಿಟ್ಜರ್ಲೆಂಡ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಂಥೆಸ್ ಸಂಸ್ಥೆ `ಪೀಕ್~ ಕೃತಕ ತಲೆಬುರುಡೆಯನ್ನು ತಯಾರಿಸುತ್ತದೆ. ಕೃಷ್ಣ ಅವರ ತಲೆಬುರುಡೆಯ ಅಳತೆ ನೀಡಿ ಇದನ್ನು ತರಿಸಿಕೊಳ್ಳಲಾಗಿದೆ. 2011ರ ಮಧ್ಯಭಾಗದಲ್ಲಿಯೇ ಸುಮಾರು 5 ಗಂಟೆಗಳ ಸತತ ಶಸ್ತ್ರಚಿಕಿತ್ಸೆ ಮೂಲಕ ತಲೆಬುರುಡೆಯನ್ನು ಅಳವಡಿಸಲಾಗಿದೆ~ ಎಂದರು.

`ಈ ಕೃತಕ ತಲೆಬುರುಡೆಯು 15-18 ಸೆ.ಮೀ. ಉದ್ದ, 10ರಿಂದ 12 ಸೆ.ಮೀ. ಅಗಲ ಇದೆ. ಜೋಡಣೆಯ ಬಳಿಕ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆಯಾದರೂ ಓಡಾಡಲು ಇನ್ನೂ ಬೇರೆಯವರ ಸಹಾಯ ಬೇಕು~ ಎಂದರು.

ಆಸ್ಪತ್ರೆಯ ವೈದ್ಯರು, ರೋಗಿ ಹಾಗೂ ಅವರ ಕುಟುಂಬದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.