ಚನ್ನರಾಯಪಟ್ಟಣ: ಪ್ರತಿ ವರ್ಷ ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗ ಮಾಡುತ್ತಿರುವ ನಿರಂತರ ರಂಗ ಕಲಾವಿದರು ಪಟ್ಟಣದಲ್ಲಿ ಶಿವರಾತ್ರಿಯಂದು ಲಿಮ್ಕಾ ದಾಖಲೆಗಾಗಿ ಕೃತಕ ಮಳೆಯಲ್ಲಿ ‘ಮೌನ’ ಎಂಬ ನಾಟಕ ಪ್ರದರ್ಶಿಸಿದರು.ಅರ್ಧ ಗಂಟೆ ನಾಟಕದಲ್ಲಿ ಹಿನ್ನೆಲೆ ಹಾಡು ಬಿಟ್ಟರೆ ಇಡೀ ನಾಟಕದಲ್ಲಿ ಮಾತಿಲ್ಲ. ನಾಟಕದ ಸಾರವನ್ನು ಮೌನ ಸಾರುತ್ತದೆ. ಈ ನಾಟಕ ಕೋರ್ಮುಸೌಹಾರ್ದತೆ ಸಾರುತ್ತದೆ.

ಹಿಂದೂಮುಸ್ಲಿ ಮರು, ದೇವಾಲಯ, ಮಸೀದಿ ವಿಚಾರದಲ್ಲಿ ಪರಸ್ಪರ ಕಾದಾಡಿ ಸಾವನ್ನಪ್ಪುತ್ತಾರೆ. ನಂತರ ಭಾರತ ಮಾತೆ ಪಾತ್ರಧಾರಿ ಅವರಿಗೆ ಮರು ಜನ್ಮನೀಡುತ್ತಾರೆ. ಹಿಂದೂ ಮುಸ್ಲಿಮರು, ದೇಶಕ್ಕಾಗಿ ದುಡಿದ ಮಹಾನಿಯರ ಅವತಾರ ಪಡೆಯುತ್ತಾರೆ. ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯರೆಲ್ಲರೂ ಒಂದೇ ಎಂಬ ಸಂದೇಶ ನೀಡುತ್ತಾರೆ. ವಂದೇ ಮಾತರಂ ಗೀತೆಯೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಇಡೀ ನಾಟಕ ಕೃತಕ ಮಳೆಯಲ್ಲಿ ನಡೆಯುವುದು ವಿಶೇಷ.

ನಾಟಕದ ಪರಿಕಲ್ಪನೆ. ನಿರ್ದೇಶನ ನಂಜುಂಡ ಮೈಮ್ ಅವರದು. ಉಪನ್ಯಾಸಕ ಎ. ಚಿದಂಬರ್, ಎಚ್.ಕೆ. ಪ್ರಕಾಶ್, ಶಿವಶಂಕರಪ್ಪ, ಜಿ.ಆರ್. ಮೋಹನ್, ಮಂಜಪ್ಪ, ಸಿ.ಟಿ. ಕುಮಾರಸ್ವಾಮಿ, ಟೆಲಿಕಾಂ ನಾಗರಾಜು, ಶಿವರಾಂ ಬರಾಳು, ನಾಗರಾಜು, ಕೆ.ಎಸ್. ವಸಂತ್, ಸಿ.ಬಿ. ರಶ್ಮಿ ಅಭಿನಯಿಸಿದ್ದಾರೆ. ಹಿನ್ನೆಲೆ ಗಾಯನ ಇಂದಿರಾ ಶಾಸ್ತ್ರಿ, ಮೋಹನ್ ಅವರದು. ಧ್ವನಿ ಬೆಳಕು ವೆಂಕಟೇಶ್, ಕೃತಕ ಮಳೆ ವ್ಯವಸ್ಥೆಯನ್ನು ಕೆ. ಅಂತೋಣಿ ನಿರ್ವಹಿಸಿದರು. ಇದಕ್ಕೂ ಮೊದಲು ಡಾ. ಚಂದ್ರು ಕಾಳೇನಹಳ್ಳಿ, ರಂಗಗೀತೆ ಹಾಡುವ ಮೂಲಕ ನಾಟಕಕ್ಕೆ ಚಾಲನೆ ನೀಡಿದರು. ಈ ತಂಡ ಈಗಾಗಲೇ ನಾಲ್ಕು ಲಿಮ್ಕಾ ದಾಖಲೆ ಮಾಡಿರುವ ಹೆಗ್ಗಳಿಕೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.