ಶುಕ್ರವಾರ, ಮೇ 20, 2022
19 °C

ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಕರ್ನಾಟಕ ಪ್ರಕಾಶನ: ಕನ್ನಡ ಭವನ, ಜೆ.ಸಿ. ರಸ್ತೆ. ಶನಿವಾರ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಂದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ `ಇಗೋ ಕನ್ನಡ ಸಂಯುಕ್ತ ಸಂಪುಟ' ಹಾಗೂ ಟಿ.ಆರ್. ಅನಂತರಾಮು, ಸಿ.ಆರ್. ಕೃಷ್ಣರಾವ್ ಅವರ `ವಿಜ್ಞಾನ ತಂತ್ರಜ್ಞಾನ ನಿಘಂಟು' (ಇಂಗ್ಲಿಷ್-ಕನ್ನಡ) ಕೃತಿಗಳ ಲೋಕಾರ್ಪಣೆ.ಇಗೋ ಕನ್ನಡ ಮೂರು ಸಂಪುಟಗಳು ಸಂಯುಕ್ತ ಸಂಪುಟವಾಗಿ ಲೋಕಾರ್ಪಣೆಗೊಳ್ಳುತ್ತಿದ್ದು, ಇದರಲ್ಲಿ ಪದದ ವ್ಯತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ, ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ. ಹೀಗೆ ಎಲ್ಲಾ ವಿವರಗಳ ಮಹಾಪೂರವೇ ಸಂಪುಟದಲ್ಲಿವೆ.`ವಿಜ್ಞಾನ ತಂತ್ರಜ್ಞಾನ ನಿಘಂಟು' ಕೃತಿಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ನೀಡಲಾಗಿದೆ. ವಿಜ್ಞಾನದ ಎಲ್ಲಾ ಶಾಖೆಗಳಿಗೆ ಸಂಬಂಧಿಸಿದ ಸುಮಾರು 14 ಸಾವಿರ ಪದಗಳನ್ನು ಒಳಗೊಂಡಿದೆ. ಅತಿ ಸೂಕ್ಷ್ಮ ಅರ್ಥವ್ಯತ್ಯಾಸವಿರುವ ಕ್ಲಿಷ್ಟಪದಗಳಿಗೆ ನಿಖರವಾದ ವಿವರಣೆ ನೀಡಿ ಗೊಂದಲವನ್ನು ನಿವಾರಿಸಲಾಗಿದೆ. ಎಂ.ಎಚ್. ಕೃಷ್ಣಯ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 5.ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6, ವಾಡಿಯಾ ರಸ್ತೆ, ಬಸವನಗುಡಿ. ಭಾನುವಾರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಂದ ಬಿ.ಎಸ್. ಕೇಶವರಾವ್ ಅವರ `ಸರಸ ಸಾಹಿತ್ಯ ಸಾರಾಮೃತ' ಹಾಗೂ `ಕನ್ನಡಕ್ಕೊಬ್ಬನೇ ಕೈಲಾಸಂ' (ಐದನೇ ಮುದ್ರಣ) ಕೃತಿಗಳ ಲೋಕಾರ್ಪಣೆ.ಅತಿಥಿಗಳು: ಪತ್ರಕರ್ತ ಜೋಗಿ, ಲೇಖಕ ಎಂ.ಎಸ್. ನರಸಿಂಹಮೂರ್ತಿ. ಮಹಾಬಲ ಸೀತಾಳಬಾವಿ ಅವರು ಅನುವಾದಿಸಿರುವ ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕ ಪ್ರದರ್ಶನ. ಬೆಳಿಗ್ಗೆ 10.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.