ಕೃಷಿ ಇವರ ವೃತ್ತಿ, ಕಲೆ ಪ್ರವೃತ್ತಿ. ವೃತ್ತಿ ಮತ್ತು ಪ್ರವೃತ್ತಿಯ ಸಮ್ಮಿಳನ ಇವರ ಸದನ, ಅದರೊಳಗೆ ವೈವಿಧ್ಯತೆಯ ಅನಾವರಣ...
ಹೌದು. ದೂರದಿಂದ ನೋಡಿದರೆ ಇದೊಂದು ಸಾಮಾನ್ಯ ಕೃಷಿಕನ ಮನೆ. ಆದರೆ ಒಳಗೆ ಹೋದರೆ, ಕೃಷಿ ಉಪಕರಣಗಳು, ಹೊಲ- ತೋಟಗಳಲ್ಲಿ ಸಿಗುವ ಕಸಗಳು ಇವರ ಮನೆಯಲ್ಲಿ ಕಲೆಯ ರೂಪ ಪಡೆದುಕೊಂಡಿರುವುದು ಅಚ್ಚರಿ ಮೂಡಿಸುತ್ತವೆ. ಬೆಟ್ಟ-ಗುಡ್ಡಗಳಲ್ಲಿ ಬಿದ್ದುಕೊಂಡಿರುವ ಮರದ ಬೇರು, ಬೊಡ್ಡೆಗಳೆಲ್ಲಾ ಇಲ್ಲಿ ಜೀವಂತಿಕೆ ಪಡೆದುಕೊಂಡಿವೆ. ಅಡಿಕೆ ತೊಗರು ಮನೆಯ ಗೋಡೆಯಲ್ಲಿ ಚಿತ್ತಾರ ಮೂಡಿಸಿವೆ.

ಇದು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಪ್ರದೇಶಕ್ಕೆ ಹೊಂದಿಕೊಂಡಿರುವ ಯಲ್ಲಾಪುರ ತಾಲ್ಲೂಕಿನ ಹಿತ್ಲಳ್ಳಿ ಸಮೀಪದ ಜಾಲೀಮನೆಯ ವೆಂಕಣ್ಣನವರ ಕನಸಿನ ಕೂಸು ‘ಸ್ವಸ್ತಿಕ್ ಆರ್ಟ್ ಗ್ಯಾಲರಿ’ಯ ನೋಟ. ಕೃಷಿಯನ್ನೇ ಉಸಿರಾಗಿಸಿಕೊಂಡು, ಕಲಾ ಪ್ರವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪರಿಣಾಮ ಈ ಕಲಾತ್ಮಕ ಮನೆ ಮೈದಳೆದು ನಿಂತಿದೆ. ಒಂದೆಡೆ ಮಲೆನಾಡಿನ ಸಿರಿಗೆ ಸಾಕ್ಷಿಯಾಗಿ ನಿಂತಿರುವ ಗುಡ್ಡ-ಬೆಟ್ಟಗಳ ಸಾಲು, ಮತ್ತೊಂದೆಡೆ ಕೃಷಿಕರ ಜೀವನಕ್ಕೆ ಆಧಾರ ಸ್ತಂಭವಾಗಿರುವ ಅಡಿಕೆ ತೋಟದ ಸಾಲು... ಇವುಗಳ ಮಧ್ಯೆ ತಲೆಯೆತ್ತಿ ನಿಂತಿದೆ ಈ ಕಲಾವೈಭವ.

ಕಲೆಯ ಬೆನ್ನೇರಿ
ಎಸ್ಸೆಸ್ಸೆಲ್ಸಿವರೆಗೆ ಓದಿರುವ ವೆಂಕಣ್ಣ, ತಂದೆಯೊಂದಿಗೆ ಪಾರಂಪರಿಕ ಕೃಷಿ ಕಸುಬಿಗೆ ಹೆಗಲೂರಿದರು. ಅದರೊಂದಿಗೆ ತಮ್ಮ ಕಲಾ ಪ್ರವೃತ್ತಿಯಾಗಿ ಶುಭಾಶಯ ಪತ್ರ ತಯಾರಿಸುವಿಕೆ, ಬೇರು-ಬೊಗಟೆಗಳ ಸಂಗ್ರಹ, ಅಶ್ವತ್ಥ ಎಲೆಯ ಮೇಲೆ ಚಿತ್ರ ಬಿಡಿಸುವಿಕೆ... ಇತ್ಯಾದಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಹವ್ಯಾಸವಾಗಿ ಆರಂಭಿಸಿದ ಆ ಕಲಾ ಪ್ರೌಢಿಮೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ.

ಹಿತ್ಲಳ್ಳಿಯ ಸೊಸೈಟಿಯಿಂದ ಸುಮಾರು ಒಂದು ಕಿ. ಮೀ. ದೂರದಲ್ಲಿ ಜಾಲೀಮನೆಯಿದೆ. ಆ ಪುಟ್ಟ ಊರಿನ ಸಾಲು ಸಾಲು ಮನೆಗಳ

ಮಧ್ಯೆಯೇ ವೆಂಕಣ್ಣನವರ ‘ಕಲಾಮನೆ’. ಟಾರ್ ರಸ್ತೆಯ ಪಕ್ಕದಲ್ಲಿಯೇ ಪುಟ್ಟದಾದ ದೊಣಕಲು, ಅದಕ್ಕೆ ತಾಗಿಕೊಂಡೇ ಸ್ವಸ್ತಿಕ್ ಆರ್ಟ್ ಗ್ಯಾಲರಿ ಎಂಬ ಹೆಸರಿನ ಫಲಕ ಕಾಣುತ್ತದೆ. ಆ ಫಲಕದ ಪಕ್ಕದ ಇಳಿಜಾರಿನ ದಾರಿಯಲ್ಲಿ ಹತ್ತಾರು ಹೆಜ್ಜೆ ಸಾಗಿದಾಗ ಕಲ್ಲುಬಂಡೆಯಲ್ಲಿ ಚಿತ್ರಿಸಿದ ಗಣೇಶನ ದರ್ಶನ ಆಗುತ್ತದೆ. ಅಲ್ಲಿಂದ ಬಲಗಡೆ ಹೋದರೆ ಮರದ ಬೊಡ್ಡೆಯಲ್ಲಿ ಚಿತ್ರಿಸಿದ ‘ಹ್ಯಾಪಿ ಮ್ಯಾನ್’ ದರ್ಶನ...
ಇನ್ನೊಂದಿಷ್ಟು ಅಡಿ ಇಟ್ಟರೆ ಹೊರ ಗೋಡೆಗೆ ವೆಂಕಣ್ಣನ ಕೈಚಳಕದಿಂದ ಮೂಡಿದ ಪ್ರಾಣಿ-ಪಕ್ಷಿಗಳ ಚಿತ್ತಾರ, ಮತ್ತೊಂದು ಕಡೆಯ ಗೋಡೆಯಲ್ಲಿ ಚೆಂದದ ಪೇಂಟಿಂಗ್ ಗೋಚರಿಸುತ್ತದೆ. ಮನೆಯ ಎದುರು ಭಾಗ ವಿಶಿಷ್ಟ ಕಲೆಯಿಂದ ಮೈಸೆಟೆದು ನಿಂತಿದೆ. ಮರದ ಬೇರು ಅಲ್ಲಿ ಆಸನವಾಗಿ ಸಿದ್ಧಗೊಂಡಿದೆ. ಹಳೆಯ ಪ್ಲಾಸ್ಟಿಕ್ ಬುಟ್ಟಿ, ಪ್ಲಾಸ್ಟಿಕ್ ಪೈಪಿನ ತುಂಡುಗಳಿಂದ ಸೃಷ್ಟಿಸಿರುವ ಗಣಪ ಕಣ್ಸೆಳೆಯುತ್ತಾನೆ.

ಜಗುಲಿಯ ಕಡೆ ದೃಷ್ಟಿ ಬೀರಿದರೆ ವೆಂಕಣ್ಣನ ಮಗ ಅಕ್ಷಯನ ಪೇಂಟಿಂಗ್ ಚಿತ್ತಾರಗಳು ಗಮನ ಕಸಿದುಕೊಳ್ಳುತ್ತವೆ. ಮನೆಯ ಅಟ್ಟದ ಎಂಚಿಣಿಯನ್ನು ಹತ್ತುವಾಗಲೇ ಹೆಣ್ಣಿನ ಮುಖ ಚಹರೆ ಚಿತ್ರಿಸಿದ ಆಕರ್ಷಕ ಚಿತ್ತಾರವಿದೆ. ಅಲ್ಲಿಯೇ ತುಸು ದೂರದಲ್ಲಿ ಮೆತ್ತಿನ ಗ್ಯಾಲರಿಯಲ್ಲಿ ಪುರುಷನ ಮುಖ ಭಾಗವನ್ನು ಅಂದವಾಗಿ ರೂಪಿಸಲಾಗಿದೆ. ಒಂದು ಭಾಗದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಗಾಜಿನ ಬಾಟಲಿಗಳಿವೆ. ಬೇರು- ಬೊಗಟೆಗಳಲ್ಲಿ ಸಹಜವಾಗಿ ಮೂಡಿದ ೧೫೦ಕ್ಕೂ ಹೆಚ್ಚು ತರಹದ ಗಣಪತಿಯ ಮುಖ ಹೋಲುವ ವೈವಿಧ್ಯಮಯ ಕಲಾಕೃತಿಗಳು ಆ ಮನೆಯಲ್ಲಿವೆ. ಮಾತ್ರವಲ್ಲ, ಮರದ ದಿಮ್ಮಿ -ತುಂಡುಗಳಲ್ಲಿ ಮೂಡಿದ ಪ್ರಾಣಿ-ಪಕ್ಷಿ ಇನ್ನಿತರ ಆಕರ್ಷಕ ಕಲಾಕೃತಿಗಳಲ್ಲಿ ಬೃಹತ್ ಸಂಗ್ರಹವೇ ಅಲ್ಲಿದೆ.

ಹಳೆಯ ಕಾಲದ ಗಡಿಯಾರ, ಕೊಳಗ, ತಾಳೇ ಗರಿ, ತಕ್ಕಡಿ, ಬೀಸಣಿಕೆ, ಚಕ್ಕುಲಿ ಮುಟ್ಟು, ಹೂವು ಕೀಳುವ ಚೊಬ್ಬೆ, ಮರದ ತಂಬೂರಿ, ಮರದ ತೊಟ್ಟಿಲು, ಬಾಂಬುವಿನ ಲೊಟ್ಟೆ, ತರತರದ ಮರದ ಸೌಟು, ಹಿಂದೆ ಬಳಕೆಯಲ್ಲಿದ್ದ ಅಪರೂಪದ ಕ್ಯಾಮೆರಾ, ಗ್ರಾಮಾಫೋನ್, ಚರಕ, ರೈಲ್ವೆ ಲ್ಯಾಟಿನ್, ವಿಶಿಷ್ಟ ಗ್ಯಾಸ್ಲೈಟ್, ಇತ್ಯಾದಿಗಳಿವೆ. ಬಗೆ ಬಗೆಯ ಸಾಂಬಾರು ಬಟ್ಟಲು, ವಿವಾಹ ಮಂಟಪದಲ್ಲಿ ಉಪಯೋಗಿಸುವ ಮರಿಗೆ, ಓಕುಳಿ ಆಡಲು ಉಪಯೋಗಿಸುವ ಅಪರೂಪದ ಮರಿಗೆ, ಬೇರು ಬೊಗಟೆಗಳ ವಿಭಿನ್ನ ಕಲಾಕೃತಿಗಳೂ ಅಲ್ಲಿವೆ.

ಜನ ಸಾಮಾನ್ಯರಿಂದ ದೂರವಾಗುತ್ತಿರವ ಅಪರೂಪದ ವಸ್ತು, ಕಲಾಕೃತಿಗಳನ್ನು ಒಂದೆಡೆ ಸೇರಿಸಿ ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಕೃಷಿ ಜೀವನಕ್ಕೆ ಹೊಂದಿಕೊಂಡಿರುವ ಜಾಲೀಮನೆಯ ವೆಂಕಣ್ಣ ಪ್ರಯತ್ನ ಮಾಡಿರುವುದು ಶ್ಲಾಘನೀಯ. ವಿವಿಧ ಕಡೆಗಳಿಂದ ಅಪರೂಪದ ವಸ್ತು, ಅಲಂಕಾರದ ಕಲಾಕೃತಿಗಳನ್ನು ಹಣ ನೀಡಿಯೋ; ವಿನಿಮಯದ ಮೂಲಕವೋ ಸಂಗ್ರಹಿಸಿದ್ದಾರೆ. ಮರದ ಬೇರು -ಬೊಗಟೆಗಳ ವಿಭಿನ್ನ ಕಲಾಕೃತಿಗಳನ್ನು ಸ್ವತಃ ಗುಡ್ಡ-ಬೆಟ್ಟಗಳಿಂದ ಸಂಗ್ರಹಿಸಿದ್ದಾರೆ. ಬಹಳ ಆಸಕ್ತಿ, ಛಲದಿಂದ ಸಂಗ್ರಹಿಸಿರುವ ವೆಂಕಣ್ಣ, ಅವುಗಳನ್ನು ಸುಭದ್ರವಾಗಿ ಇಟ್ಟುಕೊಳ್ಳಲು ಮನೆಯೊಳಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆ ಕಲಾಕೃತಿಗಳನ್ನು ಶಿಸ್ತಿನಿಂದ ಇಟ್ಟಿಕೊಂಡಿರುವ ಜಾಲೀಮನೆ ವೆಂಕಣ್ಣ ತಮ್ಮ ಕನಸಿನ ಮನೆಯ ಸೊಬಗನ್ನು ಇಮ್ಮಡಿಸಿದ್ದಾರೆ.

ಒಟ್ಟಾರೆ ಈ ಮನೆ ಕೇವಲ ಮನೆಯಾಗಿ ಉಳಿದಿಲ್ಲ. ಅದು ಮಾಹಿತಿ ವಿನಿಮಯಗಳನ್ನು ಚಿತ್ರ ಸಮೇತವಾಗಿ ಅಭಿವ್ಯಕ್ತಿ ಪಡಿಸುವ ಅರಮನೆ. ವಿಶೇಷ ಸೌಕರ್ಯಗಳೇ ಇಲ್ಲದ ಆ ಪುಟ್ಟ ಹಳ್ಳಿಯಲ್ಲಿ ನೆಲೆಸಿ, ತಮ್ಮ ಮೆಚ್ಚಿನ ಕನಸಿನ ಮನೆಯನ್ನು ಆರ್ಟ್ ಗ್ಯಾಲರಿಯಾಗಿ ಪರಿವರ್ತಿಸಿದ ಹೆಗ್ಗಳಿಕೆ ವೆಂಕಣ್ಣ ಅವರದ್ದು.

ಐತಿಹಾಸಿಕ ಸಾಧನೆ
ವೆಂಕಣ್ಣನವರ ಸಾಧನೆ ಇಷ್ಟಕ್ಕೇ ಮುಗಿದಿಲ್ಲ. ೨೦೦೦ನೇ ಇಸ್ವಿಯಲ್ಲಿ ಎರಡು ಸಾವಿರ ಅಶ್ವತ್ಥ ಎಲೆಗಳಲ್ಲಿ ವೈವಿಧ್ಯಮಯ ಗಣಪತಿಯ ಚಿತ್ರಗಳನ್ನು ಬಿಡಿಸಿ, ಅದನ್ನು ಶಿರಸಿಯ ನಗರದಲ್ಲಿ ಪ್ರದರ್ಶಿಸಿ ಶಹಬ್ಬಾಸ್ಗಿರಿ ಪಡೆದಿದ್ದರು. ಸ್ವರ್ಣವಲ್ಲಿಯ ಶ್ರೀಗಳು ಭಗವದ್ಗೀತಾ ಅಭಿಯಾನ ಪ್ರಾರಂಭಿಸುವುದಾಗಿ ಸಂಕಲ್ಪಿಸಿದಾಗಲೇ ವೆಂಕಣ್ಣನವರು ಗೀತೆಯ ಎಲ್ಲಾ ಶ್ಲೋಕಗಳನ್ನು ಅಶ್ವತ್ಥ ಎಲೆಯಲ್ಲಿ ಬರೆದು, ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ (ಹುಬ್ಬಳ್ಳಿಯ ನಗರದಲ್ಲಿ) ಪ್ರದರ್ಶಿಸಿ ಐತಿಹಾಸಿಕ ಸಾಧನೆಗೈದಿದ್ದಾರೆ.

ಹೀಗೆ ಬನ್ನಿ...
ಉ. ಕ. ಜಿಲ್ಲೆಯ ಶಿರಸಿ–ಯಲ್ಲಾಪುರ ಮುಖ್ಯ ರಸ್ತೆಯಲ್ಲಿ ಚವತ್ತಿ ಎಂಬ ಊರಿದೆ. ಅಲ್ಲಿಂದ ತುಸು ಸಾಗಿ ಸೇತುವೆ ಬಳಿ ಎಡ ಭಾಗದಲ್ಲಿ ೪ ಕಿ.ಮೀ. ಕ್ರಮಿಸಿದರೆ ಜಾಲೀಮನೆ ಸಿಗುತ್ತದೆ. ಯಲ್ಲಾಪುರ-–ಶಿರಸಿ ಮಾರ್ಗದಲ್ಲಿ ಹಿತ್ಲಳ್ಳಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಗಣೇಶ ಫಾಲ್ಸ್ಗೆ ಹೋಗುವ ರಸ್ತೆಯಲ್ಲಿ ೫ ಕಿ.ಮೀ. ಸಾಗಿದರೆ ಆರ್ಟ್ ಗ್ಯಾಲರಿಯ ದರ್ಶನ ಪಡೆಯಬಹುದು. ಮಾಹಿತಿಗೆ: ೦೮೪೧೯-೨೫೫೬೬೨.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.