ಮಂಗಳವಾರ, ಏಪ್ರಿಲ್ 13, 2021
30 °C

ಕೃಷಿಗೆ ಪೂರಕವಾಗಿ ಉದ್ಯಮ ಬೆಳೆಯಲಿ: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಕೃಷಿಗೆ ಪೂರಕವಾಗಿ ಉದ್ಯಮಗಳು ಬೆಳೆಯುವಂತಾಗಲಿ, ನಾವಿಂದು ಕೃಷಿಗೆ ತೊಂದರೆಯಾಗದಂತೆ ಉದ್ಯಮದಲ್ಲಿ ಸಮನ್ವಯ ಸಾಧಿಸಿ ರಾಷ್ಟ್ರದ ಕಲ್ಯಾಣಕ್ಕೆ ಶ್ರಮಿಸಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ಚೇಶತೀರ್ಥ ಸ್ವಾಮೀಜಿ ಹೇಳಿದರು. ಮೂಡುಬಿದಿರೆಯಲ್ಲಿ ನೂತನವಾಗಿ ಆರಂಭವಾದ ‘ವಂದೇ ಮಾತರಂ ಸೌಹಾರ್ದ ಸಹಕಾರಿ’ಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಲೋಕ ಕಲ್ಯಾಣಕ್ಕಾಗಿ ಮಾಡುವಂತಹ ಪರಮಾತ್ಮನ ಪೂಜೆಯು ಒಂದು ಸೇವೆ. ನಾವು ಮಾಡುವ ಪ್ರತಿಯೊಂದು ಸೇವೆಯೂ ರಾಷ್ಟ್ರದ ಸೇವೆಯಾಗಲಿ. ನಮಗೆ ಇರುವ ಇಬ್ಬರು ತಾಯಂದಿರಾದ ರಾಷ್ಟ್ರಮಾತೆ ಮತ್ತು ತಾಯಿ ದೇವಿಯನ್ನು ಸ್ಮರಿಸಿಕೊಂಡು ದೇಶದ ಸೇವೆಯನ್ನು ಮಾಡಬೇಕು ಎಂದರು.ವಂದೇ ಮಾತರಂ ವಿವಿಧೋದ್ದೇಶ ಸೌಹರ್ದ ಸಹಕಾರಿಯ ಅಧ್ಯಕ್ಷ ಪ್ರೊ. ಎಂ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಮೂಡಾ ಅಧ್ಯಕ್ಷ ಡಾ.ಬಿ ಮಾಧವ ಭಂಡಾರಿ, ಚೌಟರ ಅರಮನೆಯ ಎಂ. ಸುನೀಲ್ ಕೀರ್ತಿ, ನಿರ್ದೇಶಕರಾದ ಚೇತನ ಕುಮಾರ್ ಶೆಟ್ಟಿ, ಸುದರ್ಶನ ಎಂ., ಉಪಾಧ್ಯಕ್ಷ ಕೆ ಶ್ಯಾಮ ಹೆಗ್ಡೆ, ಮತ್ತಿತರರು ಇದ್ದರು.ಮೊದಲ ಠೇವಣಿದಾರರಾದ ಪಿ. ಎಸ್. ಭಟ್ ಮತ್ತು ಮೋಹನದಾಸ್ ಕಾಮತ್ ಅವರಿಗೆ ಠೇವಣಿ ಪತ್ರ ವಿತರಿಸಲಾಯಿತು. ಮೂಡುಬಿದಿರೆಯಲ್ಲಿ ಸೌಹರ್ದ ಸಹಕಾರಿ ಸ್ಥಾಪನೆಗೆ ಸಹಕರಿಸಿದ ರಾಧಾಕೃಷ್ಣ ಬೋರ್ಕರ್, ಸುನೀಲ್ ಕೀರ್ತಿ, ಕೃಷ್ಣ ಕುಮಾರ್ ಅವರನ್ನು ಗೌರವಿಸಲಾಯಿತು.ಸುರತ್ಕಲ್: ಮಹಿಳಾ ದಿನಾಚರಣೆ ಇಂದು 
ಸುರತ್ಕಲ್ :
ಸುರತ್ಕಲ್ ಮಹಿಳಾ ಕೇಂದ್ರ ಆಶ್ರಯದಲ್ಲಿ ಮಂಗಳೂರು ಸಹಮತ ಫಿಲಂ ಸೊಸೈಟಿ ಮತ್ತು ಫಿಲಂ ಕ್ಲಬ್ ಗೋವಿಂದದಾಸ ಕಾಲೇಜು ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸ್ತ್ರೀ ಪರ ಚಿಂತನೆಯ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಇದೇ 8ರಂದು ಮಧ್ಯಾಹ್ನ 2ಗಂಟೆಗೆ ಸುರತ್ಕಲ್ ಮಹಿಳಾ ಕೇಂದ್ರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.