ಮಂಗಳವಾರ, ಮೇ 11, 2021
27 °C

ಕೃಷಿಗೆ ಸಮಗ್ರ ಯೋಜನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಗೆ ಸಮಗ್ರ ಯೋಜನೆ ಅಗತ್ಯ

ಮುಳಬಾಗಲು:  ರೈತರ ಹಾಗೂ ಕೃಷಿಯಲ್ಲಿನ ಸಮಸ್ಯೆ ಪರಿಹಾರವಾಗಲು ಸಮಗ್ರ ಯೋಜನೆಯ ಅನುಷ್ಠಾನದ ಅಗತ್ಯವಿದೆ ಎಂದು  ಶಾಸಕ ಅಮರೇಶ್ ಹೇಳಿದರು.ಪಟ್ಟಣದ ಡಿವಿಜಿ ರಂಗಮಂದಿರದಲ್ಲಿ ಬುಧವಾರ ನಡೆದ ರೇಷ್ಮೆ ಮತ್ತು ಟೊಮೆಟೊ ಬೆಳೆಗಾರರ ರೈತ ಸಮಾವೇಶದಲ್ಲಿ ಮಾತನಾಡಿದರು.ಕಿಸಾನ್ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ಬೇಸಾಯ ಪದ್ಧತಿ ಸುಧಾರಣೆಗೆ ಸರ್ಕಾರ ಜಾರಿಗೆ ತರುತ್ತಿರುವ ಅನೇಕ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ ಎಂದು ವಿಷಾದಿಸಿದರು. ರೈತಸೇನೆ ರಾಜ್ಯ ಘಟಕದ ಗೌರವಾಧ್ಯಕ್ಷ ಡಾ.ಎಸ್.ವಿ.ರಮೇಶ್, ಅಧ್ಯಕ್ಷ ಆರ್.ನಾರಾಯಣಗೌಡ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ತ್ರೀವೇಣಮ್ಮ, ಉಪಾಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಕನ್ನಡಭಟ ವೆಂಕಟಪ್ಪ, ವರ್ತಕರ ಸಂಘದ ಅಧ್ಯಕ್ಷ ಎನ್.ಆರ್.ಸತ್ಯಾ, ವಕೀಲರ ಸಂಘ ತಾಲ್ಲೂಕು ಘಟಕದ ಉಪಾಧ್ಯಕ್ಷ ಜಯಪ್ಪ, ನಾಗರಾಜ್, ಎಸ್.ಎನ್.ರಾಮಕೃಷ್ಣೇಗೌಡ, ಕುಮಾರಾಚಾರಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.