ಸೋಮವಾರ, ಮೇ 23, 2022
30 °C

ಕೃಷಿ ಉತ್ಸವ ಪ್ರಯೋಜನವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ತಾಲ್ಲೂಕಿನ ಕೃಷಿಕರು  ಇಲ್ಲಿನ ಪುರಭವನದಲ್ಲಿ ಇದೇ 6ರಂದು ನಡೆಯುವ ಕೃಷಿ ಉತ್ಸವದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಾ.ಪಂ.ಅಧ್ಯಕ್ಷೆ ಪ್ರೇಮಾ ದಾಮೋದರ್ ಮನವಿ ಮಾಡಿದರು. ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳು, ಕೃಷಿಕ ಸಂಘ, ಸ್ವಸಹಾಯ ಸಂಘಗಳನ್ನು ಒಳಗೊಂಡು ಕೃಷಿ ಉತ್ಸವ ಆಯೋಜಿಸಲಾಗಿದೆ. ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಪೂರಕ ಮಾಹಿತಿಗಳು ಉತ್ಸವದಲ್ಲಿ ಲಭ್ಯವಾಗಲಿದೆ ಎಂದರು.ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಸ್ವಸಹಾಯ ಸಂಘಗಳ ಕೃಷಿ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನದೊಂದಿಗೆ, 10 ಜನ ಉತ್ತಮ ಕೃಷಿಕರನ್ನು ಗೌರವಿಸಲಾಗುವುದು ಎಂದರು. ಪುರಭವನದಲ್ಲಿ 50 ಪ್ರದರ್ಶನ ಮಳಿಗೆ ಸಿದ್ಧಗೊಳಿಸಲಾಗಿದೆ. ಪಟ್ಟಣಕ್ಕೆ ಅಂದು ಆಗಮಿಸುವ ಕನ್ನಡ ರಥದ ಸ್ವಾಗತದೊಂದಿಗೆ ಕೃಷಿ ಉತ್ಸವದ ಮೆರವಣಿಗೆ ನಡೆಸಲಾಗುವುದು. ಕೃಷಿಗೆ ಸಂಬಂಧಪಟ್ಟ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಸುಚೇತ ನರೇಂದ್ರ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ನರೇಂದ್ರ, ಉತ್ಸವದ ಸಂಚಾಲಕ ಅದ್ದಡ ಸತೀಶ್, ತಾ.ಪಂ.ಸದಸ್ಯೆ ಸುಭದ್ರಮ್ಮ, ಪದ್ಮಾವತಿ, ಪೂರ್ಣಚಂದ್ರ, ತಾ.ಪಂ.ಉಪಾಧ್ಯಕ್ಷ ಜಯಂತ್, ಕೃಷಿ ಅಧಿಕಾರಿಗಳಾದ ಓಂಕಾರಪ್ಪ, ಪ್ರಶಾಂತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.