ಮಂಗಳವಾರ, ಜೂನ್ 15, 2021
27 °C
ಶಾಸಕ ಆರ್‌.ಅಶೋಕ್ ಆತ್ಮವಿಮರ್ಶೆ

ಕೃಷ್ಣಕುಮಾರ್‌ ಸೋಲಿಗೆ ನಾನೇ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್‌: ಕಳೆದ ವಿಧಾನಸಭಾ ಚುನಾ­ವಣೆ­ಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್‌ ಸೋಲಿಗೆ ನಾನೇ ಕಾರಣ ಎಂದು ಬಿಜೆಪಿ ಮುಖಂಡ, ಶಾಸಕ ಆರ್‌.ಅಶೋಕ್‌ ತಿಳಿಸಿದರು.ತಾಲ್ಲೂಕಿನ ಗವಿಮಠದಲ್ಲಿ ಭಾನು­ವಾರ ಬಿಜೆಪಿ ಕಾರ್ಯಕರ್ತರ ಸಭೆ­ಯಲ್ಲಿ ಮಾತನಾಡಿದ ಕೃಷ್ಣಕುಮಾರ್‌, ‘ನನ್ನ ಸೋಲಿಗೆ ಅಶೋಕ್‌ ಕಾರಣ’ ಎಂದು ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿ, ‘ನನ್ನಿಂದ ತಪ್ಪಾಗಿದೆ’ ಎಂದರು.ಕೃಷ್ಣಕುಮಾರ್‌ ತೀವ್ರ ಪೈಪೋಟಿ ನೀಡುತ್ತಾರೆ ಎಂಬುದು ಗೊತ್ತಾಗಿದ್ದರೆ ನಾನು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಗೆಲುವಿಗೆ ಸಹಕಾರಿ­ಯಾ­ಗು­ತ್ತಿದೆ ಎಂದ ಅಶೋಕ್, ಈಗ ನನ್ನ ಶಿಷ್ಯ­ನನ್ನು ಗೆಲ್ಲಿಸಿ. ನಿಮ್ಮನ್ನು ಶಾಸಕರನ್ನಾಗಿ ನಾವು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.ಚಿತ್ರ ನಟಿ ರಕ್ಷಿತಾ ಮಾತನಾಡಿ ಯುಪಿಎ ಸರ್ಕಾರದಲ್ಲಿ ಮಹಿಳೆ­ಯರಿಗೆ ಮೀಸಲಾತಿ, ರಕ್ಷಣೆ ದೊರೆಯಲಿಲ್ಲ ಎಂದರು.

ಅಭ್ಯರ್ಥಿ ಮುನಿರಾಜು ಮಾತ­ನಾಡಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿ. ಸಚಿವ, ಸಂಸದರ ದರ್ಪಕ್ಕೆ ಇತಿಶ್ರೀ ಹಾಕುವ ವಿಷಯದೊಂದಿಗೆ ಮತ ಕೇಳುತ್ತಿದ್ದೇನೆ ಎಂದರು.ಮಾಜಿ ಸಚಿವ ರಾಮ­ಚಂದ್ರೇ­ಗೌಡ, ಮುಖಂಡರಾದ ಡಿ.ಕೃಷ್ಣ ಕುಮಾರ್, ಚಿಕ್ಕರಾಮಣ್ಣ, ನಾರಾ­ಯಣ ಗೌಡ, ಕೃಷ್ಣರೆಡ್ಡಿ, ಇಸ್ಮಾ­ಯಿಲ್, ಕೆ.ಎಂ.­ತಿಮ್ಮಪ್ಪ, ಅರುಣ್‌­ಕುಮಾರ್, ಶಶಿಕಲಾ, ಪದ್ಮಾ, ರಂಗಸ್ವಾಮಿ, ಎಸ್‌ಟಿಡಿ ಶ್ರೀನಿವಾಸ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.