ಶನಿವಾರ, ಜೂನ್ 12, 2021
24 °C

ಕೆಂಗಲ್ ಗ್ರಾಮಸ್ಥರಿಗೆ ಸೆರೆ ಸಿಕ್ಕ ಮೊಸಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗಲ್ ಗ್ರಾಮಸ್ಥರಿಗೆ ಸೆರೆ ಸಿಕ್ಕ ಮೊಸಳೆ

ಕೂಡಲಸಂಗಮ: ಕೂಡಲಸಂಗಮ ಸಮೀಪದ ಕೆಂಗಲ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭಾನುವಾರ ಸತತ 4 ಗಂಟೆಗಳ ಕಾಲ ಪ್ರಯತ್ನ ಪಟ್ಟು ರಸ್ತೆಯಲ್ಲಿ ಮಲಗಿದ ಮೊಸಳೆಯನ್ನು ಹಿಡಿದಿದ್ದಾರೆ.ಕೆಂಗಲಗೆ ಹೋಗುವ ರಸ್ತೆಯಲ್ಲಿ ರಾತ್ರಿ 11 ಗಂಟೆಗೆ ಬಂದ ಮೊಸಳೆಯನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕರೆಯಿಸಿ ದರು. ಗ್ರಾಮದ ಯುವಕರು ಸೇರಿ ಸತತ 4 ಗಂಟೆಗಳ ಕಾಲ ವಿವಿಧ ತಂತ್ರಗಳನ್ನು ಬಳಸಿ ಮೊಸಳೆಯನ್ನು ಹಿಡಿದರು.ಗ್ರಾಮದ ಯುವಕರಾದ ಮಹಾಂತೇಶ ಉಗರಗೋಳ, ಸುರೇಶ ಕಡಿವಾಲ್,ಯಮನಪ್ಪ ಬೊಮ್ಮನಗಿ, ಯಮನಪ್ಪ ಕಡಿವಾಲ, ಜಗದೀಶ ಬೆನಕಟ್ಟಿ  ಹಾಗೂ ಹುನಗುಂದ ವಲಯ ಅರಣ್ಯ ಇಲಾಖೆಯ ಎಸ್.ಡಿ. ಉದಗಟ್ಟಿ, ವನಪಾಲಕ ಎಸ್.ವಿ. ಕ್ಷೇತ್ರಿ, ಎಸ್.ಆರ್. ಗಂಜಿಹಾಳ, ಎಂ.ಎಸ್. ಗಟ್ಟಿಗನೂರ, ಎಸ್.ವಿ. ಹಿರೇಮಠ, ಎ.ಎಂ. ಹಿರೇಮಠ ಮೊದಲಾದವರು ಮೊಸಳೆಯನ್ನು ಹಿಡಿದರು.ಅರಣ್ಯ ಇಲಾಖೆಯ ಎಸ್.ವಿ. ಹಿರೇಮಠ ಮಾತನಾಡಿ ಮಲಪ್ರಭಾ ನದಿಯಲ್ಲಿ ನೀರು ಸಂಪೂರ್ಣ ಇಳಿಮು ಖವಾಗಿರುವುದರಿಂದ ನದಿಯಲ್ಲಿ ಇರುವ ಮೊಸಳೆಗಳು ಹೊರ ಬರುತ್ತಿವೆ ಇಂತಹ ಮೊಸಳೆಗಳನ್ನು ಹಿಡಿದು ಅಣೆಕಟ್ಟೆ ಆಲಮಟ್ಟಿ ಬಿಡಲಾಗುವುದು ಕಳೆದ ಎರಡು ದಿನಗಳ ಹಿಂದೆ ಮೇದನಾಪುರದ ಬಳಿಯಲ್ಲಿ 11 ಅಡಿ ಉದ್ದದ ಮೊಸಳೆಯನ್ನು ಹಿಡಿದು ಆಲಮಟ್ಟಿ ಅಣೆಕಟ್ಟೆಯಲ್ಲಿ ಬಿಡಲಾಗಿದೆ  ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.