ಸೋಮವಾರ, ಮಾರ್ಚ್ 8, 2021
29 °C

ಕೆಂಗೇರಿ ಬಳಿ ವಿವಿ ಕ್ಯಾಂಪಸ್ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ ಬಳಿ ವಿವಿ ಕ್ಯಾಂಪಸ್ ನಿರ್ಮಾಣ

ಬೆಂಗಳೂರು: ನಗರ ಯೋಜನೆಗೆ ಸಂಬಂಧಿಸಿದಂತೆ ಶಿಕ್ಷಣ ನೀಡಲು ನಗರದ ಕೆಂಗೇರಿ ಬಳಿ ಸುಮಾರು 58 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣವಾಗಲಿದೆ.

`ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟ್ಲ್‌ಮೆಂಟ್~ (ಐಐಎಚ್‌ಎಸ್)ನ ನಿರ್ದೇಶಕ ಅರೋಮರ್ ರೇವಿ ನಗರದಲ್ಲಿ ಸೋಮವಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, `ನ್ಯಾಷನಲ್ ಯೂನಿವರ್ಸಿಟಿ ಆಫ್ ಇನೋವೇಷನ್~ ಎಂಬ ಹೆಸರಿನಲ್ಲಿ ಈ ಸಂಸ್ಥೆ ಆರಂಭವಾಗಲಿದ್ದು, ಜಾಗ ನೀಡಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಗಳವಾರದಿಂದ (ಜೂ.14) ನಗರ ಯೋಜನೆಯ ವಿವಿಧ ಕೋರ್ಸುಗಳನ್ನು ತಾತ್ಕಾಲಿಕವಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್~ (ನಿಯಾಸ್)ನ ಆವರಣದಲ್ಲಿ ನಡೆಸಲಾಗುವುದು~ ಎಂದು ಹೇಳಿದರು.

`ಮುಂದಿನ ಮೂರು ವರ್ಷಗಳಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಗೇರಿ ಬಳಿಯ ಜಾಗದಲ್ಲಿ, ಇಡೀ ದೇಶದಲ್ಲಿಯೇ ವಿಶಿಷ್ಟ ಕ್ಯಾಂಪಸ್ಸನ್ನಾಗಿ ಪರಿವರ್ತಿಸಲು ಯೋಜಿಸಲಾಗಿದ್ದು, 1,200 ವಿದ್ಯಾರ್ಥಿಗಳು, 200 ಬೋಧಕ ಸಿಬ್ಬಂದಿ ಇರಲಿದ್ದಾರೆ. ಯಾವುದೇ ಕೋರ್ಸನ್ನು ಪಡೆದವರೂ ಸಹ ಇಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಬಹುದಾಗಿದೆ. ಈ ಕೋರ್ಸನ್ನು ಪೂರೈಸಿದವರು ಸಾರ್ವಜನಿಕ ವಲಯಕ್ಕೆ ಸೇರಬೇಕೆಂದು ನಮ್ಮ ಆಸೆ. ಖಾಸಗಿ ಸಾಂಸ್ಥೆಗಳಲ್ಲೂ ಕೆಲಸ ಮಾಡಬಹುದಾಗಿದೆ~ ಎಂದು ಅವರು ವಿವರಿಸಿದರು.

`ಸಮಕಾಲೀನ ಭಾರತದ ಸ್ಥಿತಿಗತಿ (ವಿನ್ಯಾಸ, ವಾಣಿಜ್ಯ ಹಿನ್ನೆಲೆ), ಪರಿಸರ, ಅರ್ಥವ್ಯವಸ್ಥೆಯ ಸಮರ್ಥ ತಿಳಿವಳಿಕೆ ಸೇರಿದಂತೆ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಶಿಕ್ಷಣವನ್ನು ನೀಡಲಾಗುವುದು~ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.