ಮಂಡ್ಯ: ಜಿಲ್ಲೆಯ ಕೆಆರ್ಎಸ್ ಅಣೆಕಟ್ಟೆಗೆ ಹೊಂದಿಕೊಂಡಿರುವ ಕಾರ್ಯಕ್ರಮಗಳ ನಿಷೇಧಿತ ಉದ್ಯಾನದಲ್ಲಿ ಗುರುವಾರ ರಾತ್ರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕ್ರೀಡಾಪಟುಗಳು ಗುಂಡಿನ ಪಾರ್ಟಿ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ 66ನೇ ರಾಷ್ಟ್ರೀಯ ಸೀನಿಯರ್್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಉದ್ಯಾನದಲ್ಲಿ ತಿಂಡಿ ತಿನ್ನುವಂತಿಲ್ಲ. ಧೂಮಪಾನ ಮಾಡುವಂತಿಲ್ಲ. ಹುಲ್ಲಿನ ಮೇಲೆ ತಿರುಗಾಡಬಾರದು ಎಂದು ಫಲಕಗಳನ್ನು ಹಾಕಲಾಗಿದೆ. ಅಲ್ಲಿಯೇ ನೂರಾರು ಕುರ್ಚಿ, ಟೇಬಲ್ಗಳನ್ನು ಹಾಕಿ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಅಲ್ಲಿಯೇ ನಿರ್ಮಿಸಿದ್ದ ವೇದಿಕೆ ಮೇಲೆ ಆರ್ಕೆಸ್ಟ್ರಾದವರ ಹಾಡು, ನೃತ್ಯವೂ ಇತ್ತು ಎನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆ ಉದ್ಯಾನ ಆವರಣದಲ್ಲಿ ಕುರ್ಚಿ, ಟೇಬಲ್ಗಳು ಹಾಗೆಯೇ ಇದ್ದವು. ಕೆಲವು ಕಡೆ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒಂದೆರಡು ಕಡೆ ಮದ್ಯದ ಬಾಟಲ್ಗಳೂ ಇದ್ದವು. ಅಲ್ಲಲ್ಲಿ ಅನ್ನ ಚೆಲ್ಲಲಾಗಿತ್ತು. ಸಣ್ಣ ಸಸಿಗಳು ನೆಲ ಕಚ್ಚಿದ್ದವು.

ಪಾರ್ಟಿಯ ಮಾಹಿತಿ ಪಡೆಯಲು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರ ಮೊಬೈಲ್ ‘ಸ್ವಿಚ್ ಆಫ್’ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.