ಶನಿವಾರ, ಏಪ್ರಿಲ್ 17, 2021
31 °C

ಕೆಎಸ್‌ಆರ್‌ಟಿಸಿ ನೌಕರರ ಹಿತ ಕಾಯಲು ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೆಎಸ್‌ಆರ್‌ಟಿಸಿ ನೌಕರರ ಹಿತ ಕಾಯುವಲ್ಲಿ ಎಐಟಿಯುಸಿ ನಾಯಕರು ವಿಫಲರಾಗಿದ್ದಾರೆ ಎಂದು ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಿಕೆ ನಾಯರ್ ಸೇರಿದಂತೆ ಸಿಐಟಿಯು ಮುಖಂಡರು ವಾಗ್ದಾಳಿ ನಡೆಸಿದರು.ನಗರದ ಬಾಲಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಎಸ್‌ಆರ್‌ಟಿಸಿ ನೌಕರರ- ಸಿಐಟಿಯು ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಕೆಎಸ್‌ಆರ್‌ಟಿಸಿ ನೌಕರರ ವಿರುದ್ಧ ನಿರಂತರ ಕಿರುಕುಳ ನಡೆಯುತ್ತಿದೆ.ಆದರೆ ಅಧಿಕಾರಿ ವರ್ಗದ ಕಿರುಕುಳದ ವಿರುದ್ಧ ಹೋರಾಟ ಮಾಡುವಲ್ಲಿ ಮತ್ತು ಕಾರ್ಮಿಕರಿಗೆ ನ್ಯಾಯ ಕೊಡಿಸುವಲ್ಲಿ ಎಐಟಿಯುಸಿ ವಿಫಲವಾಗಿದೆ ಎಂದು ಆರೋಪಿಸಿದರು.ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದಿಂದ ವೇತನದಲ್ಲಿ ಹೆಚ್ಚಳ ಆಗಬೇಕಾಗಿತ್ತು. ಆದರೆ ವೇತನ ಕಡಿಮೆ ಆಗಿದೆ. ನೌಕರರಿಗೆ ರೂ. 500ರಿಂದ 2000 ವರೆಗೆ ಕಡಿತಗೊಂಡಿದೆ. ಕಾರ್ಮಿಕರ ಪರವಾಗಿ ಹೋರಾಟ ಮಾಡಬೇಕಿದ್ದ ನಾಯಕರು ಮೌನವಾಗಿದ್ದಾರೆ. ಎಐಟಿಯುಸಿ ಕಾರ್ಮಿಕರ ಹಿತಕಾಪಾಡಲು ಸಾಧ್ಯವಾಗದ ಕಾರಣಕ್ಕೆ ನಾವು ಕೆಎಸ್‌ಆರ್‌ಟಿಸಿ ಯೂನಿಯನ್ ಸ್ಥಾಪನೆ ಮಾಡಲು ಮುಂದಾಗಬೇಕಾಯಿತು.ಅನಂತಸುಬ್ಬರಾವ್ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಪ್ರಸನ್ನಕುಮಾರ್ ಮುಂತಾದವರ ವಿರುದ್ಧ ದಾಖಲಿಸಿರುವ ದೂರನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.ಸಿಐಟಿಯು ಮುಖಂಡ ಮೀನಾಕ್ಷಿ ಸುಂದರಂ ಮಾತನಾಡಿ, ಕೆಎಸ್‌ಆರ್‌ಟಿಸಿ ಕಾರ್ಮಿಕರನ್ನು ಸಂಘಟಿಸುವಲ್ಲಿ ಎಐಟಿಯುಸಿ ವಿಫಲವಾಗಿದೆ. ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಮಾಡುವುದಿಲ್ಲ ಎಂದು ಈ ಹಿಂದೆ ಎಐಟಿಯುಸಿ ಮುಖಂಡರು ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ಆಪಾದಿಸಿದರು.ಕೆಎಸ್‌ಆರ್‌ಟಿಸಿ ನೌಕರ ಕೇಶವನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಸಿಐಟಿಯು ಮುಖಂಡರ ವಿರುದ್ಧ ಕೊಲೆ ದೂರು ದಾಖಲಿಸುವ ಮೂಲಕ ಮೃತರ ಕುಟುಂಬಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ನಿಗಮದಿಂದ ನೌಕರನಿಗೆ ಬರಬೇಕಾದ ಸುಮಾರು ರೂ. 4 ಲಕ್ಷ ಪರಿಹಾರ ಸಿಗುವುದಿಲ್ಲ ಎಂದು ಅವರು ಆರೋಪಿಸಿದರು.ವಿಭಾಗದ ಅಧ್ಯಕ್ಷ ಸಯ್ಯದ್‌ಮುಜೀಬ್ ಮಾತನಾಡಿ, ಕೆಎಸ್‌ಆರ್‌ಟಿಸಿ ವೇತನ ಒಪ್ಪಂದ ಸರಿಪಡಿಸಬೇಕು. ಮೃತಪಟ್ಟ ನೌಕರ ಕೇಶವನ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಸಿಐಟಿಯು ಮುಖಂಡರ ವಿರುದ್ಧದ ದೂರನ್ನು ವಾಪಸ್ ಪಡೆಯಬೇಕು. ಎಐಟಿಯುಸಿ ಗೂಂಡಾಗಿರಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.ಮುಖಂಡರಾದ ನರಸಿಂಹಯ್ಯ, ರವಿ, ಆರ್.ಎ.ಡಿಸೋಜ, ವರಲಕ್ಷ್ಮೀ, ಎ.ಆರ್.ದೇವರಾಜು, ಶಮೀಉಲ್ಲಾ, ಜಿ.ರಮೇಶ್, ಬಿ.ಉಮೇಶ್, ಎನ್.ಕೆ.ಸುಬ್ರಹ್ಮಣ್ಯ, ಎಂ.ನಾಗರಾಜು, ಮಹಾಂತೇಶ್ ಮುಂತಾದವರು ಭಾಗವಹಿಸಿದ್ದರು.ಮೆರವಣಿಗೆ: ನಗರದ ಟೌನ್‌ಹಾಲ್ ವೃತ್ತದಿಂದ ಆಶೋಕ ರಸ್ತೆ, ಎಂ.ಜಿ.ರಸ್ತೆ ಮೂಲಕ ಬಾಲಭವನದವರೆಗೆ ಎಐಟಿಯುಸಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.