ಮಂಗಳವಾರ, ಜನವರಿ 28, 2020
22 °C

ಕೆಎಸ್‌ಆರ್‌ಟಿಸಿ ಮೀಸಲಾತಿ ಗೊಂದಲ ತಪ್ಪಿದ ಸಂಚಾರ ನಿರೀಕ್ಷಕ ಹುದ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಆರ್‌ಟಿಸಿ ಸಂಚಾರ ನಿರೀಕ್ಷಕರ ಹುದ್ದೆಯ ಆಯ್ಕೆ ಪ್ರಕ್ರಿಯೆ­ಯಲ್ಲಿ ಕಾನೂನು ಉಲ್ಲಂಘಿಸಿ ಅಭ್ಯರ್ಥಿ­ಯೊಬ್ಬರಿಗೆ ಮೀಸಲಾತಿ ಕಲ್ಪಿಸಿದ್ದರಿಂದ  ಅರ್ಹರೊಬ್ಬರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.ನೇರ ನೇಮಕಾತಿ ಮೂಲಕ ಕೆಎಸ್‌­ಆರ್‌ಟಿಸಿ ಸಂಚಾರ ನಿರೀಕ್ಷಕರ ಹುದ್ದೆಗೆ 2012 ಡಿಸೆಂಬರ್‌ 12ಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು.ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಾರಹಳ್ಳಿ ಗ್ರಾಮದ ಕೆ.ಎನ್‌. ರಮೇಶ್‌ ಅವರು ‘3ಎ’ ವರ್ಗ­ದಲ್ಲಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಹತಾ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆ ನಂತರ ಸಂಭವನೀಯ ಮೆರಿಟ್‌ ಪಟ್ಟಿ ಪ್ರಕಟಿಸಲಾಯಿತು. ಈ ಪಟ್ಟಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅಂತಿಮ ಸಂಭವನೀಯ ಮೆರಿಟ್‌ ಪಟ್ಟಿ­ಯನ್ನು ಪ್ರಕಟಿಸಲಾಯಿತು. ಈ ಎರಡು ಪಟ್ಟಿಗಳಲ್ಲಿಯೂ ‘3ಎ’ ವರ್ಗದ ಅಡಿ­ಯಲ್ಲಿ ರಮೇಶ್‌ ಅವರ ಹೆಸರು ಪ್ರಕಟಿ­ಸಲಾಗಿತ್ತು. ಆದರೆ. ಅಂತಿಮ ಆಯ್ಕೆ ಪಟ್ಟಿ­ಯಲ್ಲಿ ರಮೇಶ್‌ ಹೆಸರು ನಾಪತ್ತೆಯಾಗಿತ್ತು.ಇವರ ಬದಲಾಗಿ ಸಾಮಾನ್ಯ ವರ್ಗ ಹಾಗೂ ಗ್ರಾಮೀಣ ಮೀಸಲಾತಿ ಅಡಿ­ಯಲ್ಲಿ ಅರ್ಜಿ ಸಲ್ಲಿಸಿದ್ದ  ವಿಜಾಪುರ ಜಿಲ್ಲೆಯ ಮಡಿವಾಳಪ್ಪಗೌಡ ದೊಡ್ಡ­ಮನಿ ಎನ್ನುವ ಅಭ್ಯರ್ಥಿ ಹೆಸರು ‘3ಎ’ ವರ್ಗದ ಅಡಿಯಲ್ಲಿ ಸೇರಿಸಲಾಗಿತ್ತು.‘ನಾನು 3ಎ ಗ್ರಾಮೀಣ ಅಭ್ಯರ್ಥಿಯ ಮೀಸಲಾತಿ ಅಡಿ ಅರ್ಹ ಅಭ್ಯರ್ಥಿ. ಆದರೆ, ಮಡಿವಾಳಪ್ಪಗೌಡ ದೊಡ್ಡಮನಿ ಎನ್ನುವವರನ್ನು 3ಎ ಮತ್ತು ಗ್ರಾಮೀಣ ಮೀಸಲಾತಿ ಅಡಿ ಆಯ್ಕೆ ಮಾಡಿ­ರುವುದು ಕಾನೂನುಬಾಹಿರ.  ನಾನು 3ಎ ಮತ್ತು ಗ್ರಾಮೀಣ ಮೀಸಲಾತಿ ಅಡಿ ಶೇಕಡಾ 64.05 ಅಂಕಗಳನ್ನು ಪಡೆದಿದ್ದೇನೆ. ಆದ್ದರಿಂದ ಅಂತಿಮ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಬೇಕು’ ಎಂದು ರಮೇಶ್‌ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)