ಮಂಗಳವಾರ, ಮಾರ್ಚ್ 2, 2021
31 °C

ಕೆಎಸ್‌ಸಿಎ ಕ್ರಿಕೆಟ್ ಪವನ್‌–ಅನಿರುದ್ಧ್ ಜೋಶಿ ದಾಖಲೆ ಜೊತೆಯಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಸ್‌ಸಿಎ ಕ್ರಿಕೆಟ್ ಪವನ್‌–ಅನಿರುದ್ಧ್ ಜೋಶಿ ದಾಖಲೆ ಜೊತೆಯಾಟ

ಬೆಂಗಳೂರು:  ವಲ್ಚರ್ಸ್‌ ಕ್ಲಬ್‌ ತಂಡದ ನಾಯಕ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಎಂ.ಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ   ನಡೆದ  ಪ್ರಥಮ ಡಿವಿ ಷನ್ ಲೀಗ್‌ ಕ್ರಿಕೆಟ್ ಟೂರ್ನಿಯ ಪಂದ್ಯ ದಲ್ಲಿ ಐದನೇ ವಿಕೆಟ್‌ಗೆ 403 ರನ್ನುಗಳ ದಾಖಲೆಯ ಜೊತೆಯಾಟವಾಡಿದರು.  ದ್ವಿಶತಕ ಗಳಿಸಿದ ಇಬ್ಬರೂ ಆಟಗಾರರು ಸೋಷಿಯಲ್ ಕ್ರಿಕೆಟ್‌ ಕ್ಲಬ್‌ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 131 ರನ್‌ಗಳ ಮುನ್ನಡೆ ಸಾಧಿಸಲು ಕಾರಣವಾದರು.ಸೋಷಿಯಲ್ ಕ್ಲಬ್‌ನ 327 ರನ್ನುಗ ಳನ್ನು ಬೆನ್ನತ್ತಿದ ವಲ್ಚರ್ಸ್‌ ಆರಂಭದ ಲ್ಲಿಯೇ ಆಘಾತ ಅನುಭವಿಸಿತು. 18.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 55 ರನ್ ಗಳಿಸಿತ್ತು.   ಈ ಸಂದರ್ಭದಲ್ಲಿ ನಾಯಕ ಪವನ್ ದೇಶಪಾಂಡೆ  ಜೊತೆಗೆ ಸೇರಿದ ಅನಿರುದ್ಧ ಜೋಶಿ ಪಂದ್ಯಕ್ಕೆ ಹೊಸ ತಿರುವು ನೀಡಿದರು. ಇಬ್ಬರೂ ಸಿಕ್ಸರ್‌, ಬೌಂಡರಿಗಳ ಮಳೆಯನ್ನೇ ಸುರಿಸಿದರು.ಪವನ್ (204; 258ಎಸೆತ, 24 ಬೌಂ, 3ಸಿ) ಮತ್ತು ಅನಿರುದ್ಧ್ (ಔಟಾ ಗದೇ 212 , 199ಎ, 23ಬೌಂ, 8ಸಿ)  ದ್ವಿಶತಕಗಳನ್ನು ದಾಖಲಿಸಿದರು. ಪ್ರಥಮ ಡಿವಿಷನ್‌ನಲ್ಲಿ ಇದು ಐದನೇ ವಿಕೆಟ್‌ ಜೊತೆಯಾಟದಲ್ಲಿ ದಾಖ ಲಾದ ದೊಡ್ಡ ಮೊತ್ತವಾಗಿದೆ. ಅಲ್ಲದೇ ಇಬ್ಬರು ದ್ವಿಶತಕ ದಾಖಲಿಸಿದ್ದು ಕೂಡ ಹೊಸ ದಾಖಲೆ.ಸ್ಕೋರು: ಮೊದಲ ಇನಿಂಗ್ಸ್‌: ಸೋಷಿಯಲ್ ಕ್ಲಬ್ 9ಕ್ಕೆ327 ವಲ್ಚರ್ಸ್‌ ಕ್ಲಬ್: 90 ಓವರ್‌ಗಳಲ್ಲಿ 4ಕ್ಕೆ 458 (ನಿಶಅಂತ್ ನೇಮರಾಜ್ 18, ಪವನ್ ದೇಶಪಾಂಡೆ 204, ಅನಿರುದ್ಧ ಜೋಶಿ ಔಟಾಗದೆ 212

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.