ಭಾನುವಾರ, ಏಪ್ರಿಲ್ 18, 2021
33 °C

ಕೆಟ್ಟ ಆಟವಾಡಿದ ಬಾಂಗ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಐಎಎನ್‌ಎಸ್): ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಬಾಂಗ್ಲಾ ತಂಡದ ಪ್ರದರ್ಶನದ ಬಗ್ಗೆ ಮಾಧ್ಯಮಗಳು ತೀವ್ರ ಟೀಕೆ ಮಾಡಿವೆ.ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಕೇವಲ 58 ರನ್‌ಗಳಿಗೆ ಆಲ್‌ಔಟ್ ಆಗಿ ಕೆರಿಬಿಯನ್ ದೊರೆಗಳಿಗೆ ಸುಲಭವಾಗಿ ಶರಣಾಗಿತ್ತು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದ ನಂತರ ತಂಡದ ಆಟಗಾರರು ‘ಅತಿಯಾದ ಆತ್ಮವಿಶ್ವಾಸ’ದಿಂದ ಬೀಗಿದರು ಎಂದು ನ್ಯೂ ಎಜ್ ಪತ್ರಿಕೆ ಟೀಕಿಸಿದೆ.‘ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಕೇವಲ ಕೆಟ್ಟ ಕ್ರಿಕೆಟ್ ಅಲ್ಲ. ಅದೊಂದು ಆಟವೇ ಅಲ್ಲ’ ಎಂದು  ದ. ಡೇಲಿ ಸ್ಟಾರ್ ಪತ್ರಿಕೆ ಹೇಳಿದೆ. ಅಪರೂಪಕ್ಕೊಂದು ಗೆಲುವು ಪಡೆದ ನಂತರ ಅತಿಯಾದ ಆತ್ಮವಿಶ್ವಾಸ, ತಂಡದ ಕಳಪೆ ಪ್ರದರ್ಶನ, ಕೇವಲ 58 ರನ್‌ಗಳಿಗೆ ಆಲ್ ಔಟ್ ಆಗಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು. ನಮ್ಮ ದೇಶದ ಆಟಗಾರರು ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸೋಲಲಿಲ್ಲ, ಆದರೆ ಆ ಪಂದ್ಯವನ್ನು ಅವರು ಆಡಲೇ ಇಲ್ಲ’ ಎಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ವ್ಯಂಗ ಮಾಡಿದೆ. ಅಭಿವೃದ್ಧಿ ಹೊಂದುವ ಸಮಯದಲ್ಲಿಯೇ ದೇಶದ ಕ್ರಿಕೆಟ್ ಸ್ಥಿತಿ ಹೀಗಾದರೆ ಇದರ ಸುಧಾರಣೆ ಹೇಗೆ? ಭವಿಷ್ಯದಲ್ಲಿ ಕ್ರಿಕೆಟ್ ಬೆಳವಣಿಗೆಗೆ  ಮಾರ್ಗೋಪಾಯಗಳನ್ನು ಕಂಡು ಹಿಡಯಬೇಕು. ಎಂದುಪತ್ರಿಕೆ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.