ಭಾನುವಾರ, ಜನವರಿ 26, 2020
28 °C

ಕೆರೆಯಂಗಳ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ತಾಲ್ಲೂಕಿನ ಚಾಕನಹಳ್ಳಿ ಗ್ರಾಮ­ದಲ್ಲಿ ಮಂಗಳವಾರ  ಕೆರೆ ಒತ್ತು­ವರಿ  ತೆರವಿಗೆ ತಹಶೀಲ್ದಾರ್ ಡಾ.ಬಿ.­ಸುಧಾ ಪಾಯ್ಸ್ ಚಾಲನೆ ನೀಡಿ ದರು.ನಂತರ ಮಾತನಾಡಿ, ತಾಲ್ಲೂಕಿನ ಕೆರೆಯಂಗಳ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡ ರೈತರು ತಾವಾಗಿಯೇ ತೆರವುಗೊಳಿಸದಿದ್ದಲ್ಲಿ ಸರ್ವೇ ನಡೆಸಿ, ಮುಲಾಜಿಲ್ಲದೆ ತೆರವು ಮಾಡಲಾಗು­ವುದು ಎಂದರು.ತಾಲ್ಲೂಕಿನಲ್ಲಿ 340 ಕೆರೆಗಳಿವೆ. ಕೆಲವು ಕೆರೆಗಳ ಅಂಗಳವನ್ನು ಒತ್ತುವರಿ ಮಾಡಿ­ಕೊಂಡು, ರಾಜಕಾಲುವೆಗಳನ್ನು ಮುಚ್ಚಿ­ರುವುದರಿಂದ ಹರಿಯುವ ನೀರು ಸ್ಥಗಿತಗೊಂಡಿದೆ. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಹಂತ ಹಂತವಾಗಿ ಕೆರೆಗಳ ಅಂಗಳ ಮತ್ತು ರಾಜ ಕಾಲುವೆ ತೆರವುಗೊಳಿಸಲಾಗುವುದು ಎಂದರು.ತಾಲ್ಲೂಕಿನ ಚಾಕನಹಳ್ಳಿ ಗ್ರಾಮದ ಸಮೀಪವಿರುವ ಕೆರೆ ಅಂಗಳ ಒಟ್ಟು 19 ಎಕರೆ 16 ಗುಂಟೆ ವಿಸ್ತೀರ್ಣವಿದ್ದು, ಒಂದು ಎಕರೆಗೂ ಹೆಚ್ಚು ಒತ್ತುವರಿ­ಯಾಗಿದೆ. ಸರ್ವೇ ನಡೆಸಿ, ಒತ್ತುವರಿ ತೆರವು ಮಾಡಿ ಜೆಸಿಬಿ ಯಂತ್ರದಿಂದ ಕಾಲುವೆ ತೆಗೆಸುವ ಮೂಲಕ ಗಡಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.ಕಂದಾಯಾಧಿಕಾರಿ ಬೀರಪ್ಪ, ಗ್ರಾಮ ಲೆಕ್ಕಿಗರಾದ ಶಂಕರ್, ರವಿ ಬಂಡ್ಯಾ­ಪುರ್, ಭೂಮಾಪಕ ಲಕ್ಷ್ಮಣ್, ವೆಂಕಟೇಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)