ಮಂಗಳವಾರ, ಜನವರಿ 28, 2020
25 °C

ಕೇಂದ್ರ ಅಂಗವಿಕಲ ಇಲಾಖೆ ಮುಖ್ಯ ಆಯುಕ್ತ ನಗರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ಅಂಗವಿಕಲರ ಅಧಿನಿಯಮದ ನೂತನ ಮುಖ್ಯ ಆಯುಕ್ತ ಪ್ರಸನ್ನ ಕುಮಾರ್ ಪಿಂಚ ಅವರು ಶನಿವಾರ ಹಾಗೂ ಭಾನುವಾರಗಳಂದು ಬೆಂಗಳೂರು ಪ್ರವಾಸ ಕೈಗೊಂಡಿದ್ದಾರೆ.ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಅಂಗವಿಕಲರ ಆಯುಕ್ತ ಕೆ.ವಿ.ರಾಜಣ್ಣ, `ದೇಶದಲ್ಲಿ ಇದೇ ಪ್ರಥಮ ಬಾರಿಗೆ ದೃಷ್ಟಿ ವಿಕಲರೊಬ್ಬರನ್ನು ಅಂಗವಿಕಲರ ಅಧಿನಿಯಮದ ಮುಖ್ಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದರಿಂದ ಅಂಗವಿಕಲರ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುವ ಭರವಸೆ ಮೂಡಿದೆ. ಕಳೆದ ತಿಂಗಳು ಅಧಿಕಾರ ವಹಿಸಿಕೊಂಡಿರುವ ಪ್ರಸನ್ನ ಕುಮಾರ್ ಪಿಂಚ ಅವರು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂಗವಿಕಲರ ಅಧಿನಿಯಮದ ಸಮರ್ಪಕ ಜಾರಿಯ ಬಗ್ಗೆ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ~ ಎಂದು ತಿಳಿಸಿದರು.`ಮುಖ್ಯ ಆಯುಕ್ತರು 28 ರಂದು ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.29 ರಂದು ನಗರದ ಲಿಂಗರಾಜಪುರಂನ ಎಪಿಡಿ ಅಂಗವಿಕಲರ ಸಂಸ್ಥೆಯಲ್ಲಿ ವಿವಿಧ ಅಂಗವಿಕಲ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ~ ಎಂದರು.

ಪ್ರತಿಕ್ರಿಯಿಸಿ (+)