ಶುಕ್ರವಾರ, ಮೇ 14, 2021
23 °C

ಕೇಂದ್ರ ಸಚಿವ ಖರ್ಗೆ ಆಸ್ತಿ 2.78 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸಂಪುಟದಲ್ಲಿ ಸಚಿವರಾಗಿರುವ ಕರ್ನಾಟಕದ ಮೂವರಲ್ಲಿ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೇ ಶ್ರೀಮಂತರು.ವೆಬ್‌ಸೈಟ್‌ನಲ್ಲಿ ತಮ್ಮ ವೈಯಕ್ತಿಕ ಆಸ್ತಿಯ ವಿವರವನ್ನು ನೀಡಿರುವಂತೆ ಇವರು ಬೆಂಗಳೂರಿನ ಸದಾಶಿವನಗರದಲ್ಲಿ, ಆರ್‌ಎಂವಿ ಎರಡನೇ ಹಂತದಲ್ಲಿ ಮತ್ತು ಗುಲ್ಬರ್ಗದಲ್ಲಿ ಒಂದೊಂದು ಮನೆಗಳನ್ನು ಹೊಂದಿದ್ದಾರೆ.ಇವರ ಬ್ಯಾಂಕು ಖಾತೆಯಲ್ಲಿ 89.27 ಲಕ್ಷ ರೂಪಾಯಿಗಳಿದ್ದರೆ, ಷೇರು ವಹಿವಾಟಿನಲ್ಲಿ 86,000 ರೂಪಾಯಿಗಳನ್ನು ಹೂಡಿದ್ದಾರೆ.12 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನೂ ಹೊಂದಿದ್ದಾರೆ. ಇವರ ಪತ್ನಿ ರಾಧಾಬಾಯಿ ಅವರು ನಾಲ್ಕು ಬ್ಯಾಂಕುಗಳಲ್ಲಿರುವ ಖಾತೆಗಳಲ್ಲಿ ಒಟ್ಟು 55 ಲಕ್ಷ ರೂಪಾಯಿಗಳನ್ನು ಹೊಂದಿದ್ದಾರೆ.ಹೀಗೆ ಸಚಿವ ಖರ್ಗೆಯವರ ಒಟ್ಟು ಆಸ್ತಿ  2.78 ಕೋಟಿ ರೂಪಾಯಿಗಳಷ್ಟಿದ್ದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ ಅವರ ಖಾತೆಯಲ್ಲಿರುವುದು ಕೇವಲ 13.33 ಲಕ್ಷ ರೂಪಾಯಿಗಳಷ್ಟೇ. ಜತೆಗೆ ಓಪೆಲ್ ಆಸ್ಟ್ರಾ ಕಾರು ಇದೆ. ಇವರು 5.92 ಲಕ್ಷ ರೂಪಾಯಿಗಳಷ್ಟು ಸಾಲವನ್ನೂ ಹೊಂದಿದ್ದಾರೆ.ಆದರೆ ಮೊಯಿಲಿಯವರ ಪತ್ನಿ ಮಾಲತಿ ಮೊಯಿಲಿಯವರು ಆರ್ ಟಿ ನಗರದಲ್ಲಿ 2.09 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಅವರು ಹೊಂದಿದ್ದಾರೆ. ಜತೆಗೆ 40 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನೂ ಹೊಂದಿದ್ದಾರೆ. ಇದಲ್ಲದೆ ಇವರ ಹೆಸರಿನಲ್ಲೇ ಎರಡು ಕಾರುಗಳಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.