ಬುಧವಾರ, ಜನವರಿ 22, 2020
16 °C

ಕೇಂಬ್ರಿಜ್ ಪರೀಕ್ಷೆಯಲ್ಲಿ ರಿಚಾ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂಬ್ರಿಜ್ ವಿಶ್ವವಿದ್ಯಾಲಯವು 2010ರಲ್ಲಿ ನಡೆಸಿದ್ದ ಅಂತರ ರಾಷ್ಟ್ರೀಯ ಮಟ್ಟದ `ಎ ಲೆವೆಲ್~ ಪರೀಕ್ಷೆಯ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ರಿಚಾ ಚಂದ್ರು ಭವನಂ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ಪ್ರಪಂಚದ ಒಟ್ಟು 160 ರಾಷ್ಟ್ರಗಳ 14ರಿಂದ 19 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರು. 2010ರಲ್ಲಿ ಒಟ್ಟು 15 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು ಎಂದು ಪ್ರಕಟಣೆ ತಿಳಿಸಿದೆ.ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಮತ್ತು ರೂಪಾ ಅವರ ಪುತ್ರಿಯಾದ ರಿಚಾ ಅವರು ಬೆಂಗಳೂರಿನ ಸೆಂಟರ್ ಫಾರ್ ಲರ್ನಿಂಗ್ ಶಾಲೆಯ ವಿದ್ಯಾರ್ಥಿನಿ.

ಪ್ರತಿಕ್ರಿಯಿಸಿ (+)