ಲಂಡನ್ (ಐಎಎನ್ಎಸ್): ಇಟಲಿಯ ಫೆನ್ಸಿಂಗ್ ಸ್ಪರ್ಧಿ ಆಲ್ಡೊ ಮೊಂಟಾನೊ (ಜ್ಯೂನಿಯರ್) ಅವರು ತಮ್ಮ ಕೇಶದಲ್ಲಿ ಸ್ವರ್ಣ ವರ್ಣದಿಂದ `ದೇವರೆ ರಾಣಿಯನ್ನು ರಕ್ಷಿಸು~ ಎನ್ನುವ ಸಾಲನ್ನು ಆಂಗ್ಲ ಭಾಷೆಯಲ್ಲಿ ಬರೆದುಕೊಂಡು ಗಮನ ಸೆಳೆದಿದ್ದಾರೆ.

ಒಲಿಂಪಿಯನ್ ಆಗಿದ್ದ ತಮ್ಮ ಅಜ್ಜ ಅಲ್ಡೊ ಮೊಂಟಾನೊ (ಸೀನಿಯರ್) ಅವರನ್ನು ನೆನಪಿಸಿಕೊಂಡು ನಮನ ಸಲ್ಲಿಸುವ ಉದ್ದೇಶದಿಂದ ಹೀಗೆ ಬರೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.

1996ರಲ್ಲಿ ನಿಧನರಾದ ಅಲ್ಡೊ ಸೀನಿಯರ್ ಅವರು ಒಲಿಂಪಿಕ್ಸ್ನ ಫೆನ್ಸಿಂಗ್ನಲ್ಲಿಯೇ ಬೆಳ್ಳಿ ಪದಕ ಗೆದ್ದಿದ್ದರು. 1936 ಹಾಗೂ 1948ರ ಒಲಿಂಪಿಕ್ ಕೂಟಗಳಲ್ಲಿ ಅಲ್ಡೊ ಸೀನಿಯರ್ ಪಾಲ್ಗೊಂಡಿದ್ದರು. ಆನಂತರ ಅವರ ಮಗ ಮಾರಿಯೊ ಅಲ್ಡೊ ಮಾಂಟಾನೊ ಕೂಡ 1972, 1976 ಹಗೂ 1980ರಲ್ಲಿ ನಡೆದಿದ್ದ ಕೂಟಗಳಲ್ಲಿ ಫೆನ್ಸಿಂಗ್ ಸ್ಪರ್ಧೆಯ ಸಬ್ರೆ ವಿಭಾಗದಲ್ಲಿಯೇ ಎರಡು ಬೆಳ್ಳಿ ಹಾಗೂ ಒಂದು ಸ್ವರ್ಣ ಪದಕ ಗೆದ್ದಿದ್ದರು ಎನ್ನುವುದನ್ನೂ ಮರೆಯುವಂತಿಲ್ಲ.

ಅಜ್ಜ ನಡೆದ ಹಾದಿಯಲ್ಲಿಯೇ ಮಗ ಹಾಗೂ ಮೊಮ್ಮಗ ಕೂಡ ನಡೆದಿದ್ದಾರೆ. 2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಸಬ್ರೆನಲ್ಲಿ ಚಿನ್ನದ ಪದಕ ಗೆದ್ದಿದ್ದ 33 ವರ್ಷ ವಯಸ್ಸಿನ ಅಲ್ಡೊ ಜ್ಯೂನಿಯರ್ಗೆ ಈ ಬಾರಿ ಅದೃಷ್ಟ ಒಲಿಯಲಿಲ್ಲ. ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ತಮ್ಮದೇ ದೇಶದ ಡಿಯಾಗೊ ಓಚಿವುಜಿ ವಿರುದ್ಧ ಸೋಲನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.