ಲಂಡನ್ (ಐಎಎನ್ಎಸ್): ಪ್ರತಿ ಹತ್ತು ಮಹಿಳೆಯರಲ್ಲಿ ಒಂಬತ್ತು ಮಂದಿ ತಮ್ಮ ಕೇಶ ಹಾಗೂ ಬಾಹ್ಯ ಸೌಂದರ್ಯದ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದ್ದಾರೆ! ಹೌದು, ತಮ್ಮ ಸೌಂದರ್ಯ ಕುರಿತು ಮಹಿಳೆಯರು ಹೊಂದಿರುವ ಕಲ್ಪನೆಗಳ ಬಗ್ಗೆ ವೆಬ್ಸೈಟ್ hairtrade.com ಮತ್ತು reportsfemalefirst.co.uk ಗಳು ಅಧ್ಯಯನ ನಡೆಸಿ ಈ ಅಂಶವನ್ನು ಹೊರಹಾಕಿದೆ.

ನಿತ್ಯವೂ ತಲೆಗೆ ಸ್ನಾನ ಮಾಡುವುದರಿಂದ ದಟ್ಟವಾದ ಕೂದಲು ಬೆಳೆಯುತ್ತದೆ. ಹುಬ್ಬಿನ ಒಂದೊಂದೇ ಕೂದಲನ್ನು ಕೀಳುವುದರಿಂದ ಉತ್ತಮವಾದ ಆಕಾರ ನೀಡಲು ಸಾಧ್ಯ ಹೀಗೆ ಸೌಂದರ್ಯದ ಬಗ್ಗೆ ನಾನಾ ಬಗೆಯ ಮಿಥ್ಯಗಳು ಮಹಿಳೆಯ ತಲೆಯನ್ನು ಆವರಿಸಿರುತ್ತದೆ ಎನ್ನುವುದನ್ನು ಅಧ್ಯಯನ ವಿವರಿಸಿದೆ.

ನಿತ್ಯ ತಲೆ ಸ್ನಾನದಿಂದ ತಲೆಯಲ್ಲಿನ ಸ್ವಾಭಾವಿಕ ಎಣ್ಣೆ ಅಂಶ ಕಡಿಮೆಯಾಗುತ್ತ ಬರುತ್ತದೆ. ಅಲ್ಲದೆ ಹೇರ್ ಕಂಡೀಷನರ್, ಡ್ರೈಯರ್ ಬಳಸುವುದೂ ಸಹ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೇ ಒಂದೇ ಜಾಗದಲ್ಲಿ ಕೂದಲನ್ನು ಕಟ್ಟಿಕೊಳ್ಳುವುದರಿಂದ ಕೂದಲಿನ ಮೇಲೆ ಒತ್ತಡ ಉಂಟಾಗಿ ದುರ್ಬಲಗೊಳ್ಳಲು ಕಾರಣವಾಗಲಿದೆ ಇವೆಲ್ಲದರಿಂದ ಬೊಕ್ಕ ತಲೆಯಾಗುವ ಸಾಧ್ಯತೆಯೂ ಇದೆ.

ಅಲ್ಲದೆ, ವಾರದಲ್ಲಿ ಒಮ್ಮೆಯಾದರೂ ತೊಳೆದು ಶುಚಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಇದರಿಂದ ಚರ್ಮದ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದು ಎಂದು ಅಧ್ಯಯನ ವಿವರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.