ಗುರುವಾರ , ಮೇ 6, 2021
21 °C

ಕೈಕೊಟ್ಟ ಮಳೆ: ಕಂಗಾಲಾದ ರೈತರು

ಪ್ರಜಾವಾಣಿ ವಾರ್ತೆ/ಎ.ಸಿ.ಪಾಟೀಲ Updated:

ಅಕ್ಷರ ಗಾತ್ರ : | |

ಇಂಡಿ: ತಾಲ್ಲೂಕಿನಲ್ಲಿರುವ ಒಟ್ಟು ಕೃಷಿ ಭೂಮಿಯಲ್ಲಿ ಶೇ.65ರಷ್ಟು ಮುಂಗಾರು ಬಿತ್ತನೆ ಜಮೀನುಗಳಿವೆ. ಇವುಗಳ ಬಿತ್ತನೆಗೆ ರೋಹಿಣಿ ಮತ್ತು ಮೃಗಶಿರ ಮಳೆಯ ಅಗತ್ಯವಿದೆ. ಆದರೆ ತಾಲ್ಲೂಕಿನಲ್ಲಿ ಕಳೆದ ನಾಲ್ಕಾರು ವರ್ಷ ಗಳಿಂದಲೂ ಈ ಎರಡೂ ಮಳೆ ಆಗಿಯೇ ಇಲ್ಲ. ಇದರಿಂದ ಮತ್ತೆ ರೈತರು ಆತಂಕ ಪಡುವಂತೆ ಆಗಿದೆ.ಮುಂಗಾರು ಹಂಗಾಮಿನಲ್ಲಿ ಬೆಳೆಯ ಬೇಕಾಗಿರುವ ಹೆಸರು, ಎಳ್ಳು, ಶೇಂಗಾ, ತೊಗರಿ, ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಮುಂತಾದ ಬೆಳೆಗಳು ಬೆಳೆದಿಲ್ಲ. ಈ ವರ್ಷ ರೈತ ಮುಂಗಾರಿ ಬಿತ್ತನೆಯ ಬಗ್ಗೆ ಅಪಾರ ನಂಬಿಕೆ ಯಿಟ್ಟು, ಸಾಕಷ್ಟು ಖರ್ಚು ಮಾಡಿ ಜಮೀನುಗಳನ್ನು ಹದಮಾಡಿಕೊಂಡು ಬಿತ್ತನೆಗೆಗಾಗಿ ಸಿದ್ದಮಾಡಲಾಗಿದೆ.ಆದರೆ ಜೂನ್ ಮುಗಿಯುತ್ತ ಬಂದರೂ ಕೂಡಾ ಮಳೆಯ ಸುಳಿವಿಲ್ಲ. ಇದರಿಂದ ರೈತ ಕಂಗಾಲಾ ಗಿದ್ದಾನೆ. ಜೂನ್‌ನಲ್ಲಿ ಸರಾಸರಿ 92 ಮಿ,ಮೀಟರ್ ಮಳೆ ಬೀಳಬೇಕು, ಆದರೆ ಇದೀಗ ಕೇವಲ 25.5 ಮಿ.ಮಿ. ಮಳೆಬಿದ್ದಿದೆ. ಮುಂಗಾರಿ ಬಿತ್ತನೆಯಲ್ಲಿ ಸಿದ್ಧಗೊಂಡಿ ರುವ ಜಮೀನು 1,05480 ಹೆಕ್ಟೇರ್ ಪ್ರದೇಶವಾಗಿದ್ದು, ಇದರಲ್ಲಿ ಕೇವಲ 2660 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ.3ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆಗೊಂಡ ಕೆಲವು ಕಡೆ ಮಳೆ ಇಲ್ಲದ್ದರಿಂದ ನಾಟಿಗೆ ಹೊರ ಬಂದಿಲ್ಲ. ಕಳೆದ ಒಂದು ವಾರದಿಂದ ತಣ್ಣನೆಯ ಗಾಳಿ ಬೀಸುತ್ತಿದ್ದು, ಮಳೆಯ ಲಕ್ಷಣಗಳು ಕಾಣುತ್ತಿಲ್ಲ. ಸದಾ ಮೋಡ ಕವಿದ ವಾತಾವರಣವಿದ್ದು, ಜೋರಾಗಿ ಗಾಳಿ ಬೀಸುತ್ತಿದೆ.ಕುಡಿಯುವ ನೀರಿಗೂ ಪರದಾಟ: ತಾಲ್ಲೂಕಿನಲ್ಲಿರುವ ಎಲ್ಲ ಕೆರೆ, ಕಟ್ಟೆಗಳು ಬತ್ತಿಹೋಗಿವೆ. ಕೊಳವೆ ಬಾವಿಗಳಲ್ಲಿಯ ನೀರು ಕೂಡಾ ಬತ್ತಿರುವದರಿಂದ ಕುಡಿ ಯುವ ನೀರಿಗೂ ಕೂಡಾ ಪರದಾಡುವ ಪರಿಸ್ಥಿತಿ ಬಂದಿದೆ. ತಾಲ್ಲೂಕಿನಲ್ಲಿ ಇನ್ನೂ ವರೆಗೆ 51 ಗ್ರಾಮಗಳಿಗೆ 183 ಟ್ಯಾಂಕರ್‌ಗಳ ಮೂಲಕ ಪ್ರತೀ ದಿವಸ 389 ಟ್ರಿಪ್ ನೀರು ಸರಬರಾಜು ಮಾಡ ಲಾಗುತ್ತಿದೆ ಎಂದು ತಹಶೀಲ್ದಾರ್ ಡಾ. ಸಿದ್ದು ಹುಲ್ಲೊಳ್ಳಿ ತಿಳಿಸಿದ್ದಾರೆ.ಕೊಳವೆಬಾವಿ ನಂಬಿಕೊಂಡು ನಾಟಿ ಮಾಡಿದ ಸುಮಾರು 4 ಎಕರೆ ಜಮೀನಿನಲ್ಲಿಯ ಕಬ್ಬಿನ ಬೆಳೆ ಸಂಪೂರ್ಣ ಒಣಗಿಹೋಗಿದೆ. ಇದರಿಂದ ಕುಟುಂಬಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಭತಗುಣಕಿ ಗ್ರಾಮದ ರೈತ ಕಾಡೆ ಕಂಗಾಲಾಗಿ ತನ್ನ ಅಸಹಾಯಕತೆ ತೋಡಿಕೊಂಡಿದ್ದಾರೆ.ಈಗಾಗಲೇ ಬಿತ್ತನೆ ಮಾಡಬೇಕಿದ್ದ ಹೆಸರು, ಎಳ್ಳು ಬೆಳೆಗಳ ಅವಧಿ ಪೂರ್ಣ ಗೊಂಡಿದೆ. ತಾಲ್ಲೂಕಿನಲ್ಲಿರುವ ದೀರ್ಘ ಕಾಲದ ಹಣ್ಣಿನ ಬೆಳೆಗಳಾದ ನಿಂಬೆ, ದ್ರಾಕ್ಷಿ, ದಾಳಿಂಬೆ, ಬಾರಿ, ಪೇರು ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ.`ಸರ್ಕಾರ ತಾನು ಮಾಡದಿದ್ದರೆ ಈ ಭಾಗದ ಪ್ರಮುಖ ರೈತರ ಸಮೂಹ ಗಳನ್ನು ಮಾಡಿ ಅವರಿಗೆ ಭೀಮಾ ನದಿಯಿಂದ ಪೈಪ್‌ಲೈನ್ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಬಸವೇಶ್ವರ ಶುಗರ್ಸ್‌ ಕಾರ್ಖಾನೆ' ಅಧ್ಯಕ್ಷ ಎಂ.ಎಸ್.ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.ಬಿಕೋ ಎನ್ನುತ್ತಿರುವ ಅಂಗಡಿಗಳು: ರಸಗೊಬ್ಬರ ಖರೀದಿ ಮಾಡಬೇಕಾದ ರೈತರು ಮಳೆಯ ನಿರೀಕ್ಷೆಯಲ್ಲಿ ಇದ್ದರೆ. ಖರೀದಿದಾರರು ಇಲ್ಲದೆ ರಸಗೊಬ್ಬರಗಳ ಅಂಗಡಿ ಬಿಕೋ ಎನ್ನುತ್ತಿವೆ. ಮುಂಗಾರು ಉತ್ತಮ ಮಳೆ ಆಗುತ್ತದೆ ಎಂಬ ಭರವಸೆಯೊಂದಿಗೆ ಅಪಾರ ಪ್ರಮಾಣದ ರಸಗೊಬ್ಬರಗಳ ದಾಸ್ತಾನು ಇಟ್ಟಿದ್ದರೂ ಗಿರಾಕಿಗಳು ಬರದೇ ಮಾಲೀಕರು ಪರಿತಪಿಸುವಂತೆ ಆಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.