ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಆರೋಗ್ಯ ಸಮೀಕ್ಷೆ ಆರಂಭಗೊಂಡಿದೆ. ಮುಂಬೈನ ಟಾಟಾ ಕ್ಯಾನ್ಸರ್ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ಆರೋಗ್ಯ ಕೇಂದ್ರವು ಈ ಸಮೀಕ್ಷಾ ಕಾರ್ಯವನ್ನು ಕೈಗೊಂಡಿದೆ.

ಅಣು ವಿದ್ಯುತ್ ಸ್ಥಾವರದಿಂದ ವಿಕಿರಣಗಳು ಹೊರಸೂಸಿ ಸ್ಥಾವರದ ಸುತ್ತಮುತ್ತಲ ಹಳ್ಳಿಗಳಲ್ಲಿ ಕ್ಯಾನ್ಸರ್ ಸೇರಿದಂತೆ ನಿಗೂಢವಾದ ಕಾಯಿಲೆಗಳು ಕಂಡು ಬಂದಿದ್ದು ಆರೋಗ್ಯ ಸಮೀಕ್ಷೆ ನಡೆಸಬೇಕು ಎಂದು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಭಾರತೀಯ ಅಣುಶಕ್ತಿ ಆಯೋಗ ಸಮೀಕ್ಷೆ ನಡೆಸುವುದಾಗಿ ತಿಳಿಸಿತ್ತು.

ಟಾಟಾ ಕ್ಯಾನ್ಸರ್ ಸಂಶೋಧನಾ ಕೇಂದ್ರದ ತಂಡವು ತಾಲ್ಲೂಕಿನ ಹರ್ಟುಗಾದಿಂದ ಸಮೀಕ್ಷೆ ಆರಂಭಿಸಿದೆ. ಡಾ. ಗಣೇಶ ಮತ್ತು ಡಾ. ಉಮೇಶ ನೇತೃತ್ವದಲ್ಲಿ ಒಟ್ಟು 16 ಸಿಬ್ಬಂದಿ ಆಗಮಿಸಿದ್ದು ವೈದ್ಯ, ಸಮುದಾಯ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ ಮತ್ತು ಶುಶ್ರೂಷಕಿ ಸೇರಿದಂತೆ ಒಟ್ಟು ನಾಲ್ಕು ಮಂದಿ ಇರುವ ನಾಲ್ಕು ತಂಡವನ್ನು ರಚಿಸಲಾಗಿದ್ದು ಈ ತಂಡಗಳು ಬೇರೆಬೇರೆ ಗ್ರಾಮಗಳಲ್ಲಿ ಅಲ್ಲಿಯ ಆರೋಗ್ಯದ ಸ್ಥಿತಿಗತಿ ಕುರಿತು ಮಾಹಿತಿ ಕಲೆ ಹಾಕುತ್ತಿವೆ.

ಈ ತಂಡಗಳು ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿವೆ. ಗ್ರಾಮಸ್ಥರ ವೃತ್ತಿ, ಅವರ ಕುಟುಂಬದ ಹಿನ್ನೆಲೆ, ರಕ್ತಹೀನತೆ, ಕ್ಯಾನ್ಸರ್, ದೀರ್ಘ ಕಾಲದಿಂದಿರುವ ಕಾಯಿಲೆಗಳು ಮತ್ತು ಈ ಕಾಯಿಲೆಗಳು ಕಾಣಿಸಿಕೊಳ್ಳಲು ಕಾರಣವಾದ ಅಂಶಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು ಎಂದು ಗೊತ್ತಾಗಿದೆ.

ಮಣಿಪಾಲ ಕೆಎಂಸಿ ಆಸ್ಪತ್ರೆಯ ತಂಡವು ಕೈಗಾ ವಸತಿ ಸಂಕೀರ್ಣದಲ್ಲಿ ಸ್ಥಾವರದ ಉದ್ಯೋಗಿಗಳ ಆರೋಗ್ಯ ಸಮೀಕ್ಷೆ ನಡೆಸುತ್ತಿದೆ. ಪ್ರತಿಯೊಬ್ಬ ಉದ್ಯೋಗಿ ಮನೆಗೂ ಭೇಟಿ ನೀಡಿ ಅವರಿಂದ ಕುಟುಂಬದ ಹಿನ್ನೆಲೆ, ಹಿಂದೆ ಕಾಣಿಸಿಕೊಂಡಿದ್ದ ಕಾಯಿಲೆಗಳು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ ಅದರ ಹಿನ್ನೆಲೆ, ರಕ್ತದೊತ್ತಡ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.

ಈ ಹಿಂದೆ ಯಲ್ಲಾಪುರ ತಾಲ್ಲೂಕು ಆರೋಗ್ಯಾಧಿಕಾರಿಗಳು ಕೈಗಾ ಅಣು ಸ್ಥಾವರದ ಸಲುವಾಗಿ 2005ರಿಂದ 2011ರ ವರೆಗೆ ತಾಲ್ಲೂಕಿನ ಮಲವಳ್ಳಿ, ಕಳಚೆ ಮತ್ತು ವಜ್ರಳ್ಳಿ ಗ್ರಾಮಗಳಲ್ಲಿ ಜನರ ಆರೋಗ್ಯ ಸ್ಥಿತಿಗತಿ ಸಮೀಕ್ಷೆ ನಡೆಸಿದ್ದರು. ಆಗ ಒಟ್ಟು 110 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಆರೋಗ್ಯ ಇಲಾಖೆ ತಂಡ: ಅಣು ದುರಂತ ಸಂಭವಿಸಿದರೆ ಪರಿಸ್ಥಿತಿಯನ್ನು ಎದುತಸಲು ಕೈಗಾ ಸ್ಥಾವರದ ಸುತ್ತಮುತ್ತಲಿರುವ ಆಸ್ಪತ್ರೆಗಳು ಸಜ್ಜಾಗಿವೆಯೇ ಎನ್ನುವುದನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಇಲಾಖೆಯ ವೈದ್ಯರ ತಂಡ ಈಚೆಗೆ ಕೈಗಾ ವಸತಿ ಸಂಕೀರ್ಣದಲ್ಲಿರುವ ಮತ್ತು ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿತು.

ಇಲ್ಲಿಯ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು.`ಅಣು ವಿದ್ಯುತ್ ಸ್ಥಾವರ ವ್ಯಾಪ್ತಿಗೆ ಬರುವ ಯಲ್ಲಾಪುರ, ಅಂಕೋಲಾ, ಜೋಯಿಡಾ ತಾಲ್ಲೂಕಿನಲ್ಲಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು.
ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ವೇತನ ಕಡಿಮೆ ಇರುವುದರಿಂದ ಸರ್ಕಾರಿ ಸೇವೆಗೆ ವೈದ್ಯರು ಬರುತ್ತಿಲ್ಲ. ವೈದ್ಯರನ್ನು ನೀವೇ ನೇಮಕ ಮಾಡಿ~ ಎಂದು ವೈದ್ಯರ ತಂಡದ ಮುಖ್ಯಸ್ಥರಿಗೆ ಸಲಹೆ ನೀಡಿದ್ದೇನೆ~ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕುಮಾರ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.