ಮಂಗಳವಾರ, ಜನವರಿ 28, 2020
21 °C

ಕೊರಿಯಾ ಓಪನ್‌ನಿಂದ ಹಿಂದೆ ಸರಿದ ಕಶ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭಾರತದ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್ ಭುಜದ ನೋವಿನ ಕಾರಣ 2014ರ ಜನವರಿಯಲ್ಲಿ ನಡೆಯಲಿರುವ ಕೊರಿಯಾ ಓಪನ್ ಸೂಪರ್ ಸರಣಿಯಿಂದ ಹಿಂದೆ ಸರಿದಿದ್ದಾರೆ.ವಿಶ್ವ ರ್‍ಯಾಂಕಿಂಗ್‌ನಲ್ಲಿ 14 ನೇ ಸ್ಥಾನದಲ್ಲಿರುವ ಕಶ್ಯಪ್ , ಗುಣಮುಖರಾದ ನಂತರ ಮಲೇಷ್ಯಾ ಓಪನ್‌  ಸೂಪರ್ ಸರಣಿ ಮತ್ತು ಇಂಡಿಯಾ ಗ್ರಾನ್ ಪ್ರಿೀ ಗೋಲ್ಡ್ ಟೂರ್ನಿಗಳಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.‘ಭುಜದ ನೋವಿನ ಕಾರಣದಿಂದಾಗಿ  ನನಗೆ ಕಳೆದ ಐದು ದಿನಗಳಿಂದ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಅಭ್ಯಾಸವಿಲ್ಲದೆಯೇ ಟೂರ್ನಿಯಲ್ಲಿ ಭಾಗವಹಿಸುವುದು ಅಸಾಧ್ಯ.  ಆಡಲು ಸಮರ್ಥನಾಗಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುವವರೆಗೆ ನಾನು ಕಣಕ್ಕೆ ಇಳಿಯುವುದಿಲ್ಲ. ಇನ್ನು ಒಂದು ವಾರದಲ್ಲಿ ಗುಣಮುಖನಾಗಲಿದ್ದೇನೆ.  ನಂತರ ಮಲೇಷ್ಯಾ ಮತ್ತು ಇಂಡಿಯಾ ಗ್ರಾನ್ ಪ್ರೀ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಅನಾರೋಗ್ಯದ ಕಾರಣದಿಂದಾಗಿ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಕೂಡಾ ಕೊರಿಯಾ ಓಪನ್ ಸೂಪರ್ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು.

ಪ್ರತಿಕ್ರಿಯಿಸಿ (+)