ಬೆಂಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ ತಂದೆಯೇ ಮಗುವನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುಶಾಲನಗರದ ನಿವಾಸಿ ಉಮರ್ ಫಾರುಕ್(25) ತನ್ನ ಮೂರು ತಿಂಗಳ ನೇಹಾ ಆಫ್ರಿನ್ ಎಂಬ ಹೆಣ್ಣು ಮಗುವನ್ನು ಗುರುವಾರ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಮಗುವಿನ ತಾಯಿ ಹಾಗೂ ಸಂಬಂಧಿಕರು ಯಾವುದೇ ದೂರು ನೀಡದ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
`ಮಗುವನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವಿಗೆ ಹಾಗೂ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಏ.5 ರಂದು ಮಗುವಿನ ಮೇಲೆ ಹಲ್ಲೆ ನಡೆಸಿದ್ದರು.

ಗಾಬರಿಗೊಂಡು ಅವರನ್ನು ವಿಚಾರಿಸಿದಾಗ ಮಗುವಿಗೆ ಹೊಡೆದು, ಸಿಗರೇಟ್ ತುಂಡಿನಿಂದ ಸುಟ್ಟಿದ್ದಾರೆ ಎಂಬುದು ತಿಳಿಯಿತು. ಶನಿವಾರ ನಸುಕಿನ ಜಾವ ಮಗು ರಕ್ತದ ವಾಂತಿ ಮಾಡುತ್ತಿತ್ತು. ಆ ನಂತರ ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿರುವುದು ತಿಳಿಯಿತು. ಕೂಡಲೇ ಸಂಬಂಧಿಕರೊಂದಿಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದೆವು~ ಎಂದು ತಾಯಿ ರೇಷ್ಮಾ ಭಾನು ತಿಳಿಸಿದರು.

`ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದು, ಉಸಿರಾಟದ ತೊಂದರೆ ಇರುವುದರಿಂದ ಮಗುವಿನ ಪರಿಸ್ಥಿತಿ ಗಂಭೀರವಾಗಿದೆ~ ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಗಂಗಾಧರ್ ಬೆಲ್ವಾಡಿ ಹೇಳಿದರು.
`ಘಟನೆ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯೂಸಿ) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಮಿತಿಯ ಸದಸ್ಯರು ಮಗುವಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಮಗುವಿನ ಪೋಷಕರು ಮಂಗಳವಾರ ವಿಚಾರಣೆಗೆ ಹಾಜರಾಗಲಿದ್ದಾರೆ~ ಎಂದು ಸಿಡಬ್ಲ್ಯೂಸಿ ಸದಸ್ಯರು ತಿಳಿಸಿದರು.

`ಕಾರ್ ಮೆಕಾನಿಕ್ ಆಗಿದ್ದ ಫಾರುಕ್ 2010ರ ಡಿಸೆಂಬರ್ 5 ರಂದು ರೇಷ್ಮಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ಫಾರೂಕ್ ಈ ಮದುವೆಗೆ ಆರು ತಿಂಗಳು ಇರುವಾಗ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಮೊದಲ ಪತ್ನಿ ಮಾನಸಿಕ ಅಸ್ವಸ್ಥೆಯೆಂದು ಸುಳ್ಳು ಹೇಳಿ ನನ್ನ ಮಗಳನ್ನು ಮದುವೆ ಯಾಗಿದ್ದನು~ ಎಂದು ರೇಷ್ಮಾ ಅವರ ತಂದೆ ಕರೀಂ ಖಾನ್ ತಿಳಿಸಿದರು.

ಮದುವೆಯಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ ವರದಕ್ಷಿಣೆ ಹಣಕ್ಕಾಗಿ ನನಗೆ ಕಿರುಕುಳ ನೀಡಲು ಆರಂಭಿಸಿದ್ದರು. ಅವರು ಮದ್ಯ ವ್ಯಸನಿ ಹಾಗೂ ಮಾದಕ ವ್ಯಸನಿಯಾಗಿದ್ದು ಪ್ರತಿ ದಿನ ಹಿಂಸೆ ನೀಡುತಿದ್ದರು. ಹೆಣ್ಣು ಮಗು ಆದ ನಂತರ ಮತ್ತಷ್ಟು ಕುಡಿಯಲು ಆರಂಭಿಸಿದ್ದ ಅವರು ಗಂಡು ಮಗುವಿಗಾಗಿ ಮತ್ತೊಂದು ಮದುವೆಯಾಗುವುದಾಗಿ ಹೇಳುತ್ತಿದ್ದರು ಎಂದು ರೇಷ್ಮಾ ಹೇಳಿದರು. ಆರೋಪಿ ಪಾರೂಕ್ನನ್ನು ಕಾಡುಗೊಂಡನಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.