ಭಾನುವಾರ, ಜೂಲೈ 5, 2020
22 °C

ಕೊಳವೆಬಾವಿ ಸಮೀಪ ಕಸ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕುಡಿಯುವ ಕೊಳವೆ ಬಾವಿಯ ಸಮೀಪ ನಗರದ ಕಸವನ್ನು ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಇಲ್ಲಿನ ಸಿದ್ದೇಶ್ವರ ನಗರದ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ನಗರದಿಂದ ಕಸ ಹೊತ್ತು ತರುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ತಡೆದು ನಿಲ್ಲಿಸುವ ಮೂಲಕ ಈ ಭಾಗದಲ್ಲಿ ಕಸ ಚೆಲ್ಲುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.ಪ್ರತಿನಿತ್ಯ ನಗರ ಪ್ರದೇಶದಿಂದ ಬರುವ ಲೋಡುಗಟ್ಟಲೆ ಕಸವನ್ನು ಗೊರೂರು ರಸ್ತೆ ಸಮೀಪದ ಸಿದ್ದೇಶ್ವರ ನಗರದ ರಸ್ತೆಬದಿಯಲ್ಲೇ ಸುರಿಯಲಾಗುತ್ತಿದೆ. ಕಸ ಸುರಿಯಲು ಸಿದ್ದೇಶ್ವರ ನಗರದ ಪಕ್ಕದಲ್ಲೇ ಸಾಕಷ್ಟು ಜಾಗವಿದೆ ಆದರೆ ನಗರಸಭೆ ಸಿಬ್ಬಂದಿ ರಸ್ತೆ ಪಕ್ಕದಲ್ಲೇ ಕಸದ ಸುರಿಯುತಿದ್ದಾರೆ. ಈ ಕಸದಲ್ಲಿ ಗಾಜಿನ ಪದಾರ್ಥಗಳು, ವಿವಿಧ ಆಸ್ಪತ್ರೆಗಳಿಂದ ಬಂದ ಸಿರಿಂಜ್‌ಗಳು, ಮತ್ತಿತರ ಅಪಾಯಕಾರಿ ವಸ್ತುಗಳಿರುವುದರಿಂದ ಈ ರಸ್ತೆಯಲ್ಲಿ ಒಡಾಡಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೊಗುವ ಮಕ್ಕಳು ಹಲವು ತೊಂದರೆ ಎದುರಿಸುವಂತಾಗಿದೆ.ಇಲ್ಲಿ ಸುರಿದ ಕಸಕ್ಕೆ ಬೆಂಕಿ ಹಾಕುವುದರಿಂದ ಅದರ ಹೊಗೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.‘ಸಿದ್ದೇಶ್ವರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಇಲ್ಲಿಯೇ ಇದೆ. ಅದರ ಸುತ್ತ ಕಸದ ರಾಶಿ ಆವರಿಸಿರುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಭೀತಿ ಉಂಟಾಗಿದೆ. ಈ ಭಾಗದ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಶಾಸಕ ಎಚ್.ಎಸ್. ಪ್ರಕಾಶ್ ಅವರನ್ನು ಹಲವುಬಾರಿ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.‘ನಗರದ ತ್ಯಾಜವಿ ಲೇವಾರಿಗೆ ಸರ್ಕಾರ ಅನುದಾನ ನೀಡುತ್ತಿದೆ. ಅದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು ನಮಗೆ ತೊಂದರೆಯಾಗದ ರೀತಿಯಲ್ಲಿ ಕಸ ನಿರ್ವಹಣೆ ಮಾಡಬೇಕು. ನಗರಸಭೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದೆ ನಗರಸಭೆಯ ಮುಂದೆಯೇ ಕಸದ ರಾಶಿ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.