ಚಿಕ್ಕಮಗಳೂರು: ನಗರದ ಹೊರವಲಯ ಹಿರೇಮಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಕೋದಂಡ ರಾಮಚಂದ್ರ ಸ್ವಾಮಿ ಬ್ರಹ್ಮರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಪುನರ್ವಸು ನಕ್ಷತ್ರದಲ್ಲಿ ನಡೆದ ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಅತ್ಯಂತ ಶ್ರದ್ಧಾಭಕ್ತಿಯಿಂದ ಹೂವಿನ ಅಂಲಕೃತ ರಥವನ್ನು ಗ್ರಾಮದ ರಾಜಬೀದಿಯಲ್ಲಿ ಎಳೆದು, ಹರಕೆ ತೀರಿಸಿದರು. ಗ್ರಾಮದ ಜನತೆ ರಥ ಬೀದಿಯನ್ನು ಶುಚಿಗೊಳಿಸಿ, ಸಾರಿಸಿ, ರಂಗೋಲಿ ಹಾಕಿದ್ದರು.

ರಥೋತ್ಸವ ಅಂಗವಾಗಿ ಹಿರೇಮಗಳೂರಿನ ಕೋದಂಡರಾಮ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಕೋದಂಡ ರಾಮಚಂದ್ರ ಸ್ವಾಮಿಗೆ ವಿಶೇಷ ಪೂಜೆಗಳು ಜರುಗಿದವು. ಕೃಷ್ಣ ಗಂಧೋತ್ಸವ, ವಸಂತ ಸೇವೆ, ಮಂಟಪ ಸೇವೆ, ಕುಂಕುಮೋತ್ಸವ ನಡೆದವು.

ದೇವಾಲಯ ದ್ವಾರದಿಂದ ಆರಂಭವಾದ ರಥೋತ್ಸವ ಭಕ್ತರ ಜಯಘೋಷದ ನಡುವೆ ಸಾಗಿತು. ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ರಥಕ್ಕೆ ಬಾಳೆಹಣ್ಣು ಎಸೆದು, ಭಕ್ತಿ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.