ಬುಧವಾರ, ಜೂನ್ 3, 2020
27 °C

ಕೋಲಾರ: ಮತ ಎಣಿಕೆಗೆ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮತ ಎಣಿಕೆ ನಡೆಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದ್ದಾರೆ. ಜಿಲ್ಲೆಯ ಒಟ್ಟು 28 ಜಿಲ್ಲಾ ಪಂಚಾಯಿತಿ ಚುನಾವಣೆ ಕ್ಷೇತ್ರ ಮತ್ತು 101 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಡಿ.26ರಂದು ನಡೆಸಿದ ಚುನಾವಣೆಯ ಮತಗಳ ಎಣಿಕೆಯು ಐದು ತಾಲ್ಲೂಕು ಕೇಂದ್ರಗಳಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ಶುರುವಾಗಲಿದೆ.

 

102 ತಾ.ಪಂ. ಪೈಕಿ ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 101 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಕೇಂದ್ರಗಳಲ್ಲಿ ಮೇಜುಗಳನ್ನು ಅಳವಡಿಸಲಾಗಿದೆ. ಮೆಷ್, ಬ್ಯಾರಿಕೇಡಿಂಗ್ ಮಾಡಲಾಗಿದೆ. ಎಣಿಕೆ ಏಜೆಂಟರಿಗೆ ಪಾಸುಗಳನ್ನು ವಿತರಿಸಲಾಗಿದೆ ಎಣಿಕಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೇಂದ್ರಗಳಲ್ಲಿ ಧೂಮಪಾನ, ಮೊಬೈಲ್ ಫೋನ್ ಹಾಗೂ ಕ್ಯಾಮರಾಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಜಿ.ಪಂ. ಕ್ಷೇತ್ರಗಳಿಗೆ ಒಟ್ಟು 18 ಕೊಠಡಿಗಳ 84 ಮೇಜುಗಳು ಮತ್ತು ತಾ.ಪಂ. ಕ್ಷೇತ್ರಗಳಿಗೆ ಒಟ್ಟು 19 ಕೊಠಡಿಗಳ 101 ಮೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ.ಜಿ.ಪಂ. ಮತ ಎಣಿಕೆ ಸಂಬಂಧ 84 ಮೇಲ್ವಿಚಾರಕರು ಮತ್ತು 84  ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ತಾ.ಪಂ. ಮತ ಸಂಬಂಧ 101 ಮೇಲ್ವಿಚಾರಕರು ಹಾಗೂ 101 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಜಿ.ಪಂ.ಗೆ 18 ಹಾಗೂ ತಾ.ಪಂ.ಗೆ 15 ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಿದೆ.ಎಣಿಕಾ ಮೇಜುಗಳಿಗೆ ಅನುಗುಣವಾಗಿ ಪ್ರತಿ ಮೇಜಿಗೆ ತಲಾ ಒಬ್ಬಂರಂತೆ ಮತ ಎಣಿಕೆ ಏಜೆಂಟರಿಗೆ ಪಾಸುಗಳನ್ನು ವಿತರಿಸಲಾಗಿದೆ. ಫಲಿತಾಂಶಗಳನ್ನು ಆಗಿಂದ್ದಾಗ್ಗೆ  ಘೋಷಿಸಲು ಮತ ಎಣಿಕಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಎಣಿಕೆ ಆರಂಭವಾದ ಸುಮಾರು 3 ಗಂಟೆಯ ಅವಧಿಯೊಳಗಾಗಿ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.ಮದ್ಯಪಾನ ನಿರೋಧ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜ.3ರ ರಾತ್ರಿ 10.30ರಿಂದ 4ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶ ಒಳಗೊಂಡಂತೆ ಪೂರ್ಣ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯಪಾನ ನಿರೋಧ ದಿನವನ್ನು ಘೋಷಿಸಲಾಗಿದೆ.  ಜಿ.ಪಂ, ತಾ.ಪಂ. ಕ್ಷೇತ್ರವಾರು ಮತ ಎಣಿಕೆ ಕೊಠಡಿ ವಿವರ ಹೀಗಿದೆ.ಕೋಲಾರ ತಾಲ್ಲೂಕು- ಬಾಲಕರ ಸರ್ಕಾರಿ ಪದಿವಿ ಪೂರ್ವ ಕಾಲೇಜು

ಜಿ.ಪಂ.-ಹೋಳೂರು, ಹುತ್ತೂರು -ಕೊಠಡಿ 1, ನರಸಾಪುರ, ಸುಗಟೂರು -ಕೊಠಡಿ .2, ವೇಮಗಲ್, ವಕ್ಕಲೇರಿ -ಕೊಠಡಿ 3.

ತಾ.ಪಂ.: ಅಮ್ಮನಲ್ಲೂರು, ಅರಾಭಿಕೊತ್ತನೂರು, ಅರಹಳ್ಳಿ, ಬೆಗ್ಲಿಹೊಸಹಳ್ಳಿ, ಬೆಳೂರು, ಚೌಡದೇನಹಳ್ಳಿ -ಕೊಠಡಿ ಸಂ.7. ಹೋಳೂರು, ಹುತ್ತೂರು, ಕ್ಯಾಲನೂರು, ಮದ್ದೇರಿ, ಮಡಿವಾಳ -ಕೊಠಡಿ 8. ಮಣಿಘಟ್ಟ, ಮಾರ್ಜೇನಹಳ್ಳಿ, ಮುದುವಾಡಿ, ಮುದುವತ್ತಿ, ನರಸಾಪುರ, ಶಾಪೂರು -ಕೊಠಡಿ 9. ಶೆಟ್ಟಿಹಳ್ಳಿ, ಸುಗಟೂರು, ಗದ್ದೆಕಣ್ಣೂರು, ತೊಟ್ಲಿ, ವೇಮಗಲ್, ವಕ್ಕಲೇರಿ -ಕೊಠಡಿ 10.ಮಾಲೂರು ತಾಲ್ಲೂಕು- ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು

 ಜಿ.ಪಂ.-ಕುಡಿಯನೂರು ಕೊಠಡಿ-1, ಲಕ್ಕೂರು -ಕೊಠಡಿ 5, ಮಾಸ್ತಿ- ಕೊಠಡಿ 2, ಟೇಕಲ್ -ಕೊಠಡಿ 3, ತೊರ್ನಹಳ್ಳಿ -ಕೊಠಡಿ ಸಂ.4.

ತಾ.ಪಂ.-ಅರಳೇರಿ, ಚಿಕ್ಕತಿರುಪತಿ, ಡಿ.ಎನ್.ದೊಡ್ಡಿ, ದಿನ್ನಹಳ್ಳಿ, ದೊಡ್ಡಕಲ್ಲಹಳ್ಳಿ -ಕೊಠಡಿ .2. ದೊಡ್ಡಶಿವಾರ, ಹುಣಸಿಕೋಟೆ, ಕುಡಿಯನೂರು, ಸೊಣ್ಣಹಳ್ಳಿ, ಯಶವಂತಪುರ -ಕೊಠಡಿ3, ಲಕ್ಕೂರು, ಮಾಸ್ತಿ, ಶಿವಾರಪಟ್ಟಣ, ಸುಗ್ಗೊಂಡಹಳ್ಳಿ, ಟೇಕಲ್ ಕೊಠಡಿ -1, ಹುರಳಗೆರೆ, ಕೋಡಿಹಳ್ಳಿ, ನೂಟವೆ -ಕೊಠಡಿ 4.ಬಂಗಾರಪೇಟೆ ತಾಲ್ಲೂಕು -ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು

ಜಿ.ಪಂ.-ಬೂದಿಕೋಟೆ, ಕಾಮಸಮುದ್ರ -ಕೊಠಡಿ 1, ಕ್ಯಾಸಂಬಳ್ಳಿ, ಪಾರಾಂಡಹಳ್ಳಿ -ಕೊಠಡಿ 2, ಬೇತಮಂಗಲ, ಡಿ.ಕೆ.ಹಳ್ಳಿ -ಕೊಠಡಿ 3, ಚಿಕ್ಕಅಂಕಂಡಹಳ್ಳಿ -ಕೊಠಡಿ 4.

ತಾ.ಪಂ.-ಅಬ್ಬಗಿರಿಹೊಸಹಳ್ಳಿ, ಬೆಂಗನೂರು, ಬೇತಮಂಗಲ, ಬೋಡೇನಹಳ್ಳಿ, ಬೂದಿಕೋಟೆ, ದೊಡ್ಡೂರು ಕರಪನಹಳ್ಳಿ -ಕೊಠಡಿ 1, ಚಿಕ್ಕಅಂಕಂಡಹಳ್ಳಿ, ಚಿನ್ನಕೋಟೆ, ದೋಣಿಮಡಗು, ಟಿ.ಗೊಲ್ಲಹಳ್ಳಿ, ಗುಲ್ಲಹಳ್ಳಿ, ಕಾಮಸಮುದ್ರ -ಕೊಠಡಿ 2, ಘಟ್ಟಕಾಮದೇನಹಳ್ಳಿ, ಹುಲಿಬೆಲೆ, ಕಂಗಾಂಡ್ಲಹಳ್ಳಿ, ಕಾರಹಳ್ಳಿ, ಕೆಂಪಾಪುರ, ಕ್ಯಾಸಂಬಳ್ಳಿ -ಕೊಠಡಿ 3, ಕೇತಗಾನಹಳ್ಳಿ, ಮಾರಿಕುಪ್ಪ, ಎನ್.ಜಿ.ಹುಲ್ಕೂರು, ರಾಮಸಾಗರ, ಸೂಲಿಕುಂಟೆ, ಸುಂದರಪಾಳ್ಯ -ಕೊಠಡಿ 4.ಮುಳಬಾಗಿಲು ತಾಲ್ಲೂಕು- ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಜಿ.ಪಂ.-ಆವಣಿ, ಪದ್ಮಘಟ್ಟ -ಕೊಠಡಿ 1, ಬೈರಕೂರು, ದುಗ್ಗಸಂದ್ರ ಕೊಠಡಿ -2, ತಾಯಲೂರು -ಕೊಠಡಿ 8.

ತಾ.ಪಂ.-ಅಂಬ್ಲಿಕಲ್, ಬೂಡಿದೇರು, ಕೊಲದೇ, ತಾಯಲೂರು -ಕೊಠಡಿ 4, ಆವಣಿ, ಬಲ್ಲ, ದೊಮ್ಮಸಂದ್ರ, ದುಗ್ಗಸಂದ್ರ, ಹೆಬ್ಬಣಿ -ಕೊಠಡಿ 5, ಗುಮ್ಮಕಲ್, ಕೆ.ಬೈಯಪ್ಪಲ್ಲಿ, ಕೊತ್ತಮಂಗಲ, ನಗವಾರ, ನಂಗಲಿ -ಕೊಠಡಿ 6, ಬೈರಕೂರು, ಪಿ.ಗಂಗಾಪುರ, ಪದ್ಮಘಟ್ಟ, ಉತ್ತನೂರು, ಯಳಚೇಪಲ್ಲಿ -ಕೊಠಡಿ 7.ಶ್ರೀನಿವಾಸಪುರ ತಾಲ್ಲೂಕು- ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು

ಜಿ.ಪಂ-ರಾಯಲ್ಪಾಡ್ ಕೊಠಡಿ 1, ದಳಸನೂರು, ಗೌನಿಪಲ್ಲಿ -ಕೊಠಡಿ 2, ರೋಣೂರು, ಯಲ್ದೂರು -ಕೊಠಡಿ .3.

ತಾ.ಪಂ-ಪುಲಗೂರಕೋಟೆ, ರಾಯಲ್ಪಾಡ್, ರೋಣೂರು, ಸೋಮಯಾಜಲಪಲ್ಲಿ, ಯಲ್ದೂರು -ಕೊಠಡಿ 4, ಅಡ್ಡಗಲ್, ಬೈರಗಾನಹಳ್ಳಿ, ಚಲ್ದಿಗಾನಹಳ್ಳಿ, ದಳಸನೂರು, ಗೌನಿಪಲ್ಲಿ, ಜೆ.ತಿಮ್ಮಸಂದ್ರ -ಕೊಠಡಿ 5, ಕೂರಿಗೇಪಲ್ಲಿ, ಕೆ.ಲಕ್ಷ್ಮೀಸಾಗರ, ಮುತ್ತಕಪಲ್ಲಿ, ನಂಬಿಹಳ್ಳಿ, ನೆಲವಂಕಿ -ಕೊಠಡಿ 6.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.