ಶನಿವಾರ, ಆಗಸ್ಟ್ 15, 2020
21 °C
ಶಫಿ ದಾರಾಷ ಕ್ರಿಕೆಟ್ ಟೂರ್ನಿ: ಮೂರನೇ ದಿನದಾಟಕ್ಕೆ ವರುಣನ ಕಾಟ

ಕೋಲ್ಟ್ಸ್ ತಂಡದ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಟ್ಸ್ ತಂಡದ ಮೇಲುಗೈ

ಬೆಂಗಳೂರು: ಅಭಿಷೇಕ್ ರೆಡ್ಡಿ ಹಾಗೂ ಸಂಜಯ್ ಕುಮಾರ್ ಅವರ ಅರ್ಧ ಶತಕಗಳ ನೆರವಿನಿಂದ ಕೆಎಸ್‌ಸಿಎ ಕೋಲ್ಟ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಶಫಿ ದಾರಾಷ ಟ್ರೋಫಿ  ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ ಎದುರು ಮೇಲುಗೈ ಸಾಧಿಸಿದ್ದಾರೆ.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನವಾದ ಶುಕ್ರವಾರ ಕೋಲ್ಟ್ಸ್ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ 73.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿದ್ದಾರೆ. ಈ ಮೂಲಕ 251 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ. ಒಡಿಶಾ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 92.5 ಓವರ್‌ಗಳಲ್ಲಿ 214 ರನ್ ಗಳಿಸಿದ್ದರು. ಶನಿವಾರ ಪಂದ್ಯದ ಕೊನೆಯ ದಿನ. ಹಾಗಾಗಿ ಈ ಪಂದ್ಯ ಕುತೂಹಲ ಕೆರಳಿಸಿದೆ.ಜಾರ್ಖಂಡ್ ಹೋರಾಟ: ಆಲೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ತಂಡದವರು ಆತಿಥೇಯ ಕೆಎಸ್‌ಸಿಎ ಇಲೆವೆನ್ ಎದುರು ಉತ್ತಮ ಮೊತ್ತ ಗಳಿಸುವತ್ತ ದಾಪುಗಾಲಿರಿಸಿದ್ದಾರೆ. ಕೆಎಸ್‌ಸಿಎ ಇಲೆವೆನ್‌ನ ಮೊದಲ ಇನಿಂಗ್ಸ್‌ನ 550 ರನ್‌ಗಳಿಗೆ ಉತ್ತರವಾಗಿ ಜಾರ್ಖಂಡ್ ತಂಡದವರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ ಮೂರನೇ ದಿನದ ಅಂತ್ಯಕ್ಕೆ 95.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದ್ದಾರೆ. ಈ ತಂಡದ ಸೌರಭ್ ತಿವಾರಿ ಆಕರ್ಷಕ ಶತಕ ಗಳಿಸಿದರು.ಆದರೆ ಮೂರನೇ ದಿನದಾಟದ ವೇಳೆ ಹೆಚ್ಚಿನ ಪಂದ್ಯಗಳಿಗೆ ಮಳೆ ಅಡಚಣೆ ಉಂಟು ಮಾಡಿತು. ಈ ಕಾರಣ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಹಾಗೂ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ನಡುವಿನ ಪಂದ್ಯ ಶುಕ್ರವಾರ ನಡೆಯಲಿಲ್ಲ. ಈ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ.ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯತ್ತಿರುವ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ಎದುರಿನ ಪಂದ್ಯದಲ್ಲಿ ಬರೋಡ ಕ್ರಿಕೆಟ್ ಸಂಸ್ಥೆ ಇನಿಂಗ್ಸ್ ಮುನ್ನಡೆ ಸಾಧಿಸಿದೆ.ಅಸ್ಸಾಂ ಕ್ರಿಕೆಟ್ ಸಂಸ್ಥೆ ಎದುರು ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ ಇನಿಂಗ್ಸ್ ಮುನ್ನಡೆ ಸಾಧಿಸುವ ಹಂತದಲ್ಲಿದೆ. ಅಸ್ಸಾಂನ 309 ರನ್‌ಗಳಿಗೆ ಉತ್ತರವಾಗಿ ಆಂಧ್ರ 82 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.ಸಂಕ್ಷಿಪ್ತ ಸ್ಕೋರ್

ಬೆಂಗಳೂರಿನಲ್ಲಿ ನಡೆದ ಪಂದ್ಯಗಳು
: ಕೆಎಸ್‌ಸಿಇ ಇಲೆವೆನ್: ಮೊದಲ ಇನಿಂಗ್ಸ್ 120 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 550; ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 95.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 291(ಸೌರಭ ತಿವಾರಿ ಬ್ಯಾಟಿಂಗ್ 110, ಭವಿಕ್ ಠಕ್ಕರ್ ಬ್ಯಾಟಿಂಗ್ 59; ಕೆ.ಗೌತಮ್ 81ಕ್ಕೆ2, ಅಮಿತ್ ವರ್ಮ 1ಕ್ಕೆ15).ಕೆಎಸ್‌ಸಿಎ ಕೋಲ್ಟ್ಸ್: ಮೊದಲ ಇನಿಂಗ್ಸ್ 91.1 ಓವರ್‌ಗಳಲ್ಲಿ 204 ಹಾಗೂ 73.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 261 (ಅಭಿಷೇಕ್ ರೆಡ್ಡಿ 90, ಎನ್.ಭರತ್ 45, ಸಂಜಯ್ ಕುಮಾರ್ ಬ್ಯಾಟಿಂಗ್ 75; ಒಡಿಶಾ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 92.5 ಓವರ್‌ಗಳಲ್ಲಿ 214(ದೀಪಕ್  ಬೆಹರಾ 33; ಡೇವಿಡ್ ಮಥಾಯಿಸ್ 65ಕ್ಕೆ5, ಅಬ್ರಾರ್ ಕಾಜಿ 31ಕ್ಕೆ2).ಬಂಗಾಳ ಕ್ರಿಕೆಟ್ ಸಂಸ್ಥೆ: 79.4 ಓವರ್‌ಗಳಲ್ಲಿ 262; ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್: 84.4 ಓವರ್‌ಗಳಲ್ಲಿ 3 ವಿಕೆಟ್‌ಗೆ 284 (ಪಂದ್ಯಕ್ಕೆ ಮಳೆ ಅಡಚಣೆ). ಹರಿಯಾಣ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್120 ಓವರ್‌ಗಳಲ್ಲಿ 9 ವಿಕೆಟ್‌ಗೆ 448 ಹಾಗೂ 24.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 81 (ಸನ್ನಿ ಸಿಂಗ್ ಬ್ಯಾಟಿಂಗ್ 52; ಶೌರ್ಯ 22ಕ್ಕೆ3); ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 75.2 ಓವರ್‌ಗಳಲ್ಲಿ 217 (ಅರ್ಪಿತ್ 35; ಆರೀಶ್ ಹೂಡಾ 36ಕ್ಕೆ3).ಗೋವಾ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 111.4 ಓವರ್‌ಗಳಲ್ಲಿ 362 (ರೋಹಿತ್ 91, ಅಮಿತ್ ಯಾದವ್ 98; ರಮಣ್ ಚಹಾರ್ 35ಕ್ಕೆ3, ರಿತುರಾಜ್ 35ಕ್ಕೆ3); ರಾಜಸ್ತಾನ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 6.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 18.ತ್ರಿಪುರಾ ಕ್ರಿಕೆಟ್ ಸಂಸ್ಥೆ:  ಮೊದಲ ಇನಿಂಗ್ಸ್ 96.1 ಓವರ್‌ಗಳಲ್ಲಿ 190 ಹಾಗೂ 37.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 74 (ಕೆ.ಬಿ.ಪವನ್ ಗಾಯಗೊಂಡು ನಿವೃತ್ತಿ 32; ಶಾಹೀದ್ 22ಕ್ಕೆ2); ಕೇರಳ ಕ್ರಿಕೆಟ್ ಸಂಸ್ಥೆ: 97.4 ಓವರ್‌ಗಳಲ್ಲಿ 331(ವಿ.ಎ.ಜಗದೀಶ್ 127; ಬಿ.ಅಭಿಜಿತ್ 33ಕ್ಕೆ5).ಮೈಸೂರು (ಎಸ್‌ಜೆಸಿಇ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣ).

ಅಸ್ಸಾಂ ಕ್ರಿಕೆಟ್ ಸಂಸ್ಥೆ
:108.4 ಓವರ್‌ಗಳಲ್ಲಿ 309; ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ: 82 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ 83.5 ಓವರ್‌ಗಳಲ್ಲಿ 177; ಬರೋಡ ಕ್ರಿಕೆಟ್ ಸಂಸ್ಥೆ: 96.1 ಓವರ್‌ಗಳಲ್ಲಿ 274 (ಹಾರ್ದಿಕ್ 67; ಪರಪ್ಪ ಮೋರ್ದಿ 65ಕ್ಕೆ4, ಜೆ.ಸುಚಿತ್ 71ಕ್ಕೆ2).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.